ಬೆಂಗಳೂರು ವಿವಿ: ಪಿಎಚ್.ಡಿ ಅರ್ಹತಾ ಅಂಕ ಸಡಿಲ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಮಾಡಲು ಬಯಸಿ ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳು ಗಳಿಸಬೇಕಾದ ಅರ್ಹತಾ ಅಂಕ ವನ್ನು ಶೇ 5ರಷ್ಟು ಅಂದರೆ ಶೇ 50 ರಿಂದ ಶೇ 45ಕ್ಕೆ ತಗ್ಗಿಸಲಾಗಿದೆ. ಇದರಿಂದಾಗಿ ಅಧಿಕ ಮಂದಿಗೆ ಪಿಎಚ್.ಡಿ.ಗೆ ಪ್ರವೇಶ ಪಡೆಯುವ ಅವಕಾಶ ದೊರೆತಿದೆ.
ಡಿಸೆಂಬರ್ 29ರಂದು ಪ್ರವೇಶ ಪರೀಕ್ಷೆ ನಡೆದಿತ್ತು. 2,058 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಅರ್ಧಕ್ಕಿಂತ ಅಧಿಕ ಮಂದಿ ನಿಗದಿತ ಶೇ 50ರಷ್ಟು ಅಂಕ ಗಳಿಸಲು ವಿಫಲರಾಗಿದ್ದರು. ಒಂದು ಬಾರಿಯ ಅವಕಾಶ ನೀಡುವ ನಿಟ್ಟಿನಲ್ಲಿ ಈ ಬಾರಿ ಅರ್ಹತಾ ಅಂಕದಲ್ಲಿ ಶೇ 5ರಷ್ಟು ಕಡಿತ ಮಾಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ.
ಶೇ 50ರಷ್ಟು ಸ್ನಾತಕೋತ್ತರ ಪದವಿಯಲ್ಲಿ ದೊರೆತ ಅಂಕವನ್ನು ಮತ್ತು ಶೇ 50ರಷ್ಟು ಅರ್ಹತಾ ಪರೀಕ್ಷೆಯ ಅಂಕವನ್ನು ಗಣನೆಗೆ ತೆಗೆದುಕೊಂಡು ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಇದೀಗ ನಿಯಮದಲ್ಲಿ ಸಡಿಲಿಕೆ ಮಾಡಿದ್ದರೂ, ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿ ಸಿಕ್ಕಿದ ತಕ್ಷಣ ಇದನ್ನು ಜಾರಿಗೆ ತರಲಾಗುವುದು, ಶೀಘ್ರ ಅನುಮತಿ ಸಿಗುವ ನಿರೀಕ್ಷೆ ಇದೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.