ಬೆಂಗಳೂರು: ವಿದೇಶದಿಂದ ಬಂದಿದ್ದ ಯುವತಿಯೊಬ್ಬಳು ವಿಮಾನ ನಿಲ್ದಾಣದಲ್ಲಿ ಕೈಗೆ ಹಾಕಿದ್ದ ಮುದ್ರೆಯನ್ನೇ ಭಾಗಶಃಅಳಿಸಿಕೊಂಡು ಓಡಾಡಿದ್ದು, ಆಕೆಯನ್ನು ಪತ್ತೆ ಹಚ್ಚಿದ ಪೊಲೀಸರು ವಶಕ್ಕೆ ಪಡೆದು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಸುಬ್ರಹ್ಮಣ್ಯನಗರದಲ್ಲಿ ವಾಸವಿರುವ ಯುವತಿ, ಹೋಮ್ ಕ್ವಾರಂಟೈನ್ನಲ್ಲಿ ಇರಬೇಕಾಗಿತ್ತು. ಆದರೆ, ಎಲ್ಲೆಂದರಲ್ಲಿ ಓಡಾಡುತ್ತಿದ್ದಳು. ಇದನ್ನು ಕಂಡ ಸ್ಥಳೀಯರು ಮಾಹಿತಿ ನೀಡಿದ್ದರು. ಆಕೆ ಮನೆಗೆ ಹೋಗಿ ಎಚ್ಚರಿಕೆ ನೀಡಿ ವಶಕ್ಕೆ ಪಡೆದೆವು ಎಂದು ಸುಬ್ರಹ್ಮಣ್ಯ ನಗರ ಠಾಣೆ ಮತ್ತು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಯುವತಿಯನ್ನು ವಶಕ್ಕೆ ಪಡೆದು ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಯುವತಿಯು ಮಾರ್ಚ್ 21ಕ್ಕೆ ಬೆಂಗಳೂರಿಗೆ ಬಂದಿದ್ದಳು.

ಶಾಪಿಂಗ್ ಮಾಡಿದ್ದ ಮಹಿಳೆ ಮೇಲೆ ಎಫ್ಐಆರ್:ವಿದೇಶದಿಂದ ಬಂದಿದ್ದ ಹಾಗೂ ಕೈ ಮೇಲೆ ಮುದ್ರೆ ಹಾಕಲಾಗಿದ್ದ ಮಹಿಳೆ ಇತ್ತೀಚೆಗಷ್ಟೇ ಶಾಪಿಂಗ್ ಮಾಲ್ಗೆಹೋಗಿ ಶಾಪಿಂಗ್ ಮಾಡಿದ್ದರು. ಆಕೆ ವಿರುದ್ದ ಇದೀಗ ವಿಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದುಬೈನಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ ಕೈಯಲ್ಲಿ ಹೋಂ ಕ್ವಾರಂಟೈನ್ ಮುದ್ರೆ ಇತ್ತು. ಮನೆಯಲ್ಲಿ ಇರಬೇಕಾದ ಮಹಿಳೆ ಮನೆಯಿಂದ ಹೊರಗೆ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಓಡಾದಿದ್ದರು.

ಇದನ್ನೂ ಓದಿ:ಬೆಂಗಳೂರು: ಕೊರೊನಾ ಕ್ವಾರಂಟೈನ್ ಮಹಿಳೆಯಿಂದ ಶಾಪಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.