ಬೆಂಗಳೂರು: ‘ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ಗಾಗಿ ಖ್ಯಾತ ಯೋಗ ಗುರು ಹಿಮಾಲಯನ್ ಸಿದ್ಧ ಅಕ್ಷರ್ ಮಾರ್ಗದರ್ಶನದಲ್ಲಿ ಬೆಟ್ಟಹಲಸೂರು ಸಮೀಪದ ಪಡುಕೋಣೆ-ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಕ್ರೀಡಾಂಗಣದಲ್ಲಿ ಶನಿವಾರ 250 ಯೋಗಪಟುಗಳು ಎರಡು ನಿಮಿಷಗಳ ಧನುರಾಸನ ಭಂಗಿಯನ್ನು ಪ್ರದರ್ಶಿಸಿದರು.

ಗಿನ್ನಿಸ್ ದಾಖಲೆ ಸೃಷ್ಟಿಯಾಗುತ್ತಿದ್ದಂತೆ 250 ಯೋಗಪಟುಗಳು ಹರ್ಷ ವ್ಯಕ್ತಪಡಿಸಿದರು. ಈ ದಾಖಲೆ ಸೃಷ್ಟಿಗಾಗಿಯೋಗ ಗುರು ಹಿಮಾಲಯನ್ ಸಿದ್ಧ ಅಕ್ಷರ್ ಕಠಿಣ ತರಬೇತಿ ನೀಡಿದ್ದರು.

‘ಯೋಗದ ಶಕ್ತಿಯ ಬಗ್ಗೆ ಜಗತ್ತಿಗೆ ಸಂದೇಶ ಸಾರುವುದು ಮತ್ತು ಯೋಗಾಭ್ಯಾಸದ ಮೂಲಕ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಹೇಗೆ ಸುಂದರವಾಗಿಸಿಕೊಳ್ಳಬಹುದು ಎಂಬುದನ್ನು ಜಗತ್ತಿಗೆ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ಹಿಮಾಲಯನ್ ಸಿದ್ಧ ಅಕ್ಷರ್ ಹೇಳಿದರು.

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವವರು, ದೇಶದ ವಿವಿಧ ರಾಜ್ಯಗಳ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಗಿನ್ನಿಸ್ ದಾಖಲೆಯ ಈ ಪ್ರಯತ್ನದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಹಿಮಾಲಯ ಯೋಗ ಆಶ್ರಮ, ವಿಶ್ವ ಯೋಗ ಸಂಸ್ಥೆ, ಇಂಟರ್ ನ್ಯಾಷನಲ್ ಸಿದ್ಧ ಫೌಂಡೇಷನ್, ಯೂ ಯೋಗ ಸೇರಿ ಹಲವು ಸಂಸ್ಥೆಗಳು ಬೆಂಬಲ ನೀಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.