ಬೆಂಗಳೂರು: ಶೇಷಾದ್ರಿಪುರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ದರೋಡೆಗೆ ಯತ್ನಿಸಲಾಗಿದ್ದು, ಸೈರನ್ ಮೊಳಗುತ್ತಿದ್ದಂತೆಯೇ ಕಳ್ಳರು ಸ್ಥಳದಿಂದ ಪರಾರಿ ಆಗಿದ್ದಾರೆ.

ಸೋಮವಾರ ನಸುಕಿನ ವೇಳೆ ಕೃತ್ಯ ಎಸಗಲು ಆರೋಪಿಗಳು ಸಂಚು ರೂಪಿಸಿ, ಗ್ರಿಲ್ ಕತ್ತರಿಸಿ ಒಳಕ್ಕೆ ನುಗ್ಗಿದ್ದರು. ದರೋಡೆಕೋರರು ಒಳಕ್ಕೆ ನುಗ್ಗುತ್ತಿದ್ದಂತೆಯೇ ಬ್ಯಾಂಕ್ ಸೈರನ್ ಮೊಳಗಿದೆ. ಆಗ ದರೋಡೆಕೋರರು ಅಲ್ಲಿಂದ ಪರಾರಿ ಆಗಿದ್ದಾರೆ. ಘಟನಾ ಸ್ಥಳಕ್ಕೆ ಶೇಷಾದ್ರಿಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

‘ಕಿಟಕಿಯ ಕಬ್ಬಿಣದ ಸರಳುಗಳನ್ನು ಕತ್ತರಿಸಿ ಒಳಕ್ಕೆ ನುಗ್ಗಿದ್ದರು. ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಬಂದು ನೋಡಿದಾಗ ಕಳ್ಳರು ಒಳಕ್ಕೆ ನುಗ್ಗಿರುವುದು ಗೊತ್ತಾಗಿ, ಶೇಷಾದ್ರಿಪುರ ಠಾಣೆಗೆ ಮಾಹಿತಿ ನೀಡಿದ್ದರು. ಸೀನ್ ಆಫ್ ಕ್ರೈಂ (ಸೋಕೊ) ತಂಡವು ಸ್ಥಳಕ್ಕೆ ಭೇಟಿ ಪರಿಶೀಲಿಸಿದೆ. ಬೆರಳಚ್ಚು ತಂಡವೂ ಭೇಟಿ ನೀಡಿತ್ತು. ದರೋಡೆಕೋರರ ಬಂಧನಕ್ಕೆ ತಂಡ ರಚಿಸಲಾಗಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಹಾಕೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.