ವಿರೋಧ ಪಕ್ಷದಲ್ಲೇ ಇದ್ದಿದ್ರೆ ತಲೆ ಬಿಸಿ ಇತ್ತಾ?: ಬಿಜೆಪಿಗೆ ಹೊರಟ್ಟಿ ಪ್ರಶ್ನೆ

ಬೆಂಗಳೂರು: ‘105 ಶಾಸಕರನ್ನು ಇರಿಸಿಕೊಂಡು ವಿರೋಧ ಪಕ್ಷದಲ್ಲಿ ಇದ್ದಿದ್ದರೆ ಸರಿ ಇತ್ತು. ಈ ಕಡೆಯಿಂದ 17 ಜನರನ್ನು ಕರ್ಕೊಂಡು ಹೋಗಿ ಸರ್ಕಾರ ಮಾಡದಿದ್ದರೆ ಈಗಿರುವ ತಲೆಬಿಸಿಗಳೆಲ್ಲಾ ಇರುತ್ತಿದ್ದವಾ’ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರು ಗುರುವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.
ಪೂರಕ ಅಂದಾಜುಗಳ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸರ್ಕಾರ ರಚನೆಯಾದ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅವರು, ‘ಕಸರತ್ತು ಮಾಡಿ ಸರ್ಕಾರ ರಚಿಸಿ ಇಲ್ಲದ ಉಸಾಬರಿ ಮೈಮೇಲೆ ಎಳ್ಕೊಂಡಿರಿ. ಈ ಕಡೆಯಿಂದ ಹೋದವರಿಗೆಲ್ಲಾ ಸಚಿವ ಸ್ಥಾನ ಬಿಟ್ಟು ಕೊಟ್ಟಿರಿ. ಮೂಲ ಬಿಜೆಪಿಯವರನ್ನು ಸಮಾಧಾನ ಮಾಡೋಕೆ ದಿನಕ್ಕೊಂದು ನಿಗಮ, ಮಂಡಳಿ ರಚಿಸುತ್ತಿದ್ದೀರಿ. ಇದೆಲ್ಲಾ ಬೇಕಿತ್ತಾ‘ ಎಂದು ಕೇಳಿದರು.
ಈಗಲೇ ವಾಂತಿ ಬರುವಷ್ಟು ನಿಗಮ, ಮಂಡಳಿಗಳಿವೆ. ಇನ್ನೆಷ್ಟು ನಿಗಮ, ಮಂಡಳಿ ಮಾಡುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅವರೂ ಹಲವು ಬಾರಿ, ‘ಆಪರೇಷನ್ ಕಮಲ ಮಾಡಿ ಸರ್ಕಾರ ಮಾಡಿದ್ದೀರಿ‘ ಎಂದು ಬಿಜೆಪಿಯವರನ್ನು ಹಂಗಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.