ಭಾನುವಾರ, ಸೆಪ್ಟೆಂಬರ್ 27, 2020
26 °C

ಬಿಬಿಎಂಪಿ: ₹1,776 ಕೋಟಿ ಆಸ್ತಿ ತೆರಿಗೆ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ 2020–21ನೇ ಸಾಲಿನ ಮೊದಲ ನಾಲ್ಕು ತಿಂಗಳುಗಳಲ್ಲಿ ₹ 1,776 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಈ ಬಾರಿ ಚಲನ್‌ಗಿಂತ ಆನ್‌ಲೈನ್‌ ಮೂಲಕ ಹೆಚ್ಚು ಆಸ್ತಿ ತೆರಿಗೆ ಪಾವತಿಯಾಗಿದೆ. 

ಕೊರೊನಾ ಸೋಂಕು ಹಬ್ಬುವುದನ್ನು ತಡೆಯುವ ಸಲುವಾಗಿ ಲಾಕ್‌ಡೌನ್‌ ಜಾರಿಯಲ್ಲಿದ್ದುದರಿಂದ ಈ ಬಾರಿ ಆಸ್ತಿ ತೆರಿಗೆ ಇಳಿಕೆಯಾಗುವ ಆತಂಕವನ್ನು ಬಿಬಿಎಂಪಿ ಎದುರಿಸಿತ್ತು. ಏಪ್ರಿಲ್‌ 30ರವರೆಗೆ ಮಾತ್ರ ಅನ್ವಯವಾಗುವಾಗುತ್ತಿದ್ದ ಶೇ 5ರಷ್ಟು ತೆರಿಗೆ ರಿಯಾಯಿತಿಯನ್ನು ಮೇ 31ರವರೆಗೂ ವಿಸ್ತರಿಸಿತ್ತು. ರಿಯಾಯಿತಿ ಜಾರಿಯಲ್ಲಿದ್ದ ಮೊದಲ ಎರಡು ತಿಂಗಳ ಅವಧಿಯಲ್ಲಿ, ಲಾಕ್‌ಡೌನ್‌ ನಡುವೆಯೂ ₹ 1,440 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು.

ಬಿಬಿಎಂಪಿಯ 2020–21ನೇ ಸಾಲಿನಲ್ಲಿ ₹ 2,442 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಇದಲ್ಲದೇ ಈ ಹಿಂದಿನ ವರ್ಷಗಳ ₹ 2,500 ಕೋಟಿ ತೆರಿಗೆ ಬಾಕಿ ವಸೂಲಾಗಬೇಕಿದೆ.

ಬಿಬಿಎಂಪಿ ವಲಯವಾರು ತೆರಿಗೆ ಸಂಗ್ರಹ ವಿವರ (ಆ.2ರವರೆಗೆ)

ವಲಯ; ತೆರಿಗೆ ಸಂಗ್ರಹ (₹ ಕೋಟಿ)

ಬೊಮ್ಮನಹಳ್ಳಿ; 177.92

ದಾಸರಹಳ್ಳಿ; 39.60

ಪೂರ್ವ; 336.46

ಮಹದೇವಪುರ; 462.95

ಆರ್‌.ಆರ್‌.ನಗರ; 123.24

ದಕ್ಷಿಣ; 299.08

ಪಶ್ಚಿಮ; 200.19

ಯಲಹಂಕ; 136.64

ಅಂಕಿ ಅಂಶ

7.44 ಲಕ್ಷ

ಬಿಬಿಎಂಪಿಗೆ 2019–20ರವರೆಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳು

20.60 ಲಕ್ಷ

2020–21ನೇ ಸಾಲಿನಲ್ಲಿ ತೆರಿಗೆ ಪಾವತಿಸಬೇಕಾದ ಆಸ್ತಿಗಳು

₹ 902.36 ಕೋಟಿ

2020–21ನೇ ಸಾಲಿನಲ್ಲಿ ಆನ್‌ಲೈನ್‌ ಮೂಲಕ ಪಾವತಿಯಾದ ತೆರಿಗೆ

₹ 873.70

2020–21ನೇ ಸಾಲಿನಲ್ಲಿ ಚಲನ್ ಮೂಲಕ ಪಾವತಿಯಾದ ತೆರಿಗೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು