ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ(ಬಿಬಿಎಂಪಿ) ಖಾಲಿಯಾಗಿರುವ ಎರಡು ಸ್ಥಾನಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಮೇ 16ರೊಳಗೆ ನಾಮಪತ್ರ ಸಲ್ಲಿಸಬಹುದಾಗಿದೆ.

ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಉಪಚುನಾವಣೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

‘ಗುರುವಾರದಿಂದಲೇ(ಮೇ 9) ಎರಡು ವಾರ್ಡ್ಗಳಲ್ಲಿ ನೀತಿ ಸಂಹಿತೆ ಜಾರಿಯಾಗಿದೆ’ ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ. ವಿವಿಪ್ಯಾಟ್ ಬಳಸುತ್ತಿಲ್ಲ. ಮತ ಚಲಾಯಿಸುವವರ ‘ಎಡಗೈ ಉಂಗುರ ಬೆರಳಿಗೆ’ ಶಾಹಿ ಹಾಕಲಾಗುತ್ತದೆ.

ಪ್ರತಿ ಅಭ್ಯರ್ಥಿಯು ಗರಿಷ್ಟ ₹ 5 ಲಕ್ಷಗಳ ವರೆಗೂ ಚುನಾವಣಾ ವೆಚ್ಚವಾಗಿ ವ್ಯಯಿಸಬಹುದು. ಮಾದರಿ ನೀತಿ ಸಂಹಿತೆಯ ಮೇಲ್ವಿಚಾರಣೆಗಾಗಿ 19 ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ಸಗಾಯಪುರ ವಾರ್ಡ್ನ ಮತಗಳ ಎಣಿಕೆಯು ಫ್ರೆಜರ್ ಟೌನ್ನ ಬಿಬಿಎಂಪಿ ಬಾಲಕಿಯರ ಪಿ.ಯು.ಕಾಲೇಜಿನಲ್ಲಿ ಹಾಗೂ ಕಾವೇರಿಪುರ ವಾರ್ಡ್ನ ಮತಗಳ ಎಣಿಕೆಯು ವಿಜಯನಗರದ ಸರ್ವೋದಯ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ನಡೆಯಲಿದೆ.

ಅಂಕಿ–ಅಂಶ
74
ಒಟ್ಟು ಮತಗಟ್ಟೆಗಳು
356
ಮತದಾನ ಪ್ರಕ್ರಿಯೆ ನಡೆಸುವ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.