ಶನಿವಾರ, ಜನವರಿ 18, 2020
26 °C

ಬಿಬಿಎಂಪಿ ಚುನಾವಣೆ: ವಿವಿಧೆಡೆ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಕ್ಷವು (ಎಎಪಿ) ಜ.11 ಮತ್ತು ಜ.12ಕ್ಕೆ ನಗರದ ವಿವಿಧ ವಾರ್ಡ್‌ಗಳಲ್ಲಿ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ಬಿಬಿಎಂಪಿ ಚುನಾವಣೆ ಅಭಿಯಾನದ ಉಸ್ತುವಾರಿ ಶಾಂತಲಾ ದಾಮ್ಲೆ ಮಾತನಾಡಿ, ‘ಜ್ಞಾನಭಾರತಿ ವಾರ್ಡ್‌ಗೆ ಎಸ್‌.ಸತೀಶ್, ಕಾಡುಗೋಡಿ ವಾರ್ಡ್‌ಗೆ ಮುನೇಂದ್ರ, ಬಾಪೂಜಿನಗರ ವಾರ್ಡ್‌ಗೆ ಕೆ.ರಾಜೇಂದ್ರ ಹಾಗೂ ರಾಜಾಜಿನಗರ ವಾರ್ಡ್‌ಗೆ ಗುರುಮೂರ್ತಿ ಅವರನ್ನು ವಾರ್ಡ್‌ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ವಾರ್ಡ್‌ಗಳಲ್ಲಿ ಸಂಜೆ 6 ಗಂಟೆಗೆ ಜನಸಂವಾದ ಕಾರ್ಯಕ್ರಮಗಳು ಹಾಗೂ ಕಿರುಚಿತ್ರ ಪ್ರದರ್ಶನಗಳು ನಡೆಯಲಿವೆ’ ಎಂದರು. 

‘ಸಂವಾದದಲ್ಲಿ ನವ ಬೆಂಗಳೂರು ನಿರ್ಮಾಣದ ಬಗ್ಗೆ ಚರ್ಚೆಗಳನ್ನು ನಡೆಸಿ, ‘ಹೊಸ ಬೆಂಗಳೂರು’ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ದೆಹಲಿಯಲ್ಲಿ ನಮ್ಮ ಸರ್ಕಾರ ಮಾಡಿದ ಸಾಧನೆಗಳನ್ನೂ ಅನಾವರಣ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು