ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 12 ಸಾವಿರ ಪಿಒಪಿ ಮೂರ್ತಿಗಳ ವಿಸರ್ಜನೆ

Last Updated 1 ಸೆಪ್ಟೆಂಬರ್ 2022, 21:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬುಧವಾರ ಒಂದೇ ದಿನ 12 ಸಾವಿರಕ್ಕೂ ಹೆಚ್ಚು ಪಿಒಪಿಮೂರ್ತಿಗಳು ವಿಸರ್ಜನೆಯಾಗಿವೆ.

ಆ.31ರಂದು ಸಂಚಾರಿ/ ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿ/ ಹೊಂಡಗಳಲ್ಲಿ ಒಟ್ಟು 1,59,980 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಅತಿ ಹೆಚ್ಚು ಮಣ್ಣಿನ ಮೂರ್ತಿಗಳು (68,521) ದಕ್ಷಿಣ ವಲಯದಲ್ಲಿ ವಿಸರ್ಜನೆಯಾಗಿದ್ದು, ಇದೇ ವಲಯದಲ್ಲಿ ಅತಿ ಹೆಚ್ಚು ಪಿಒಪಿ ಮೂರ್ತಿಗಳೂ (11,402) ವಿಸರ್ಜನೆಯಾಗಿವೆ.

ನಂತರದ ಸ್ಥಾನದಲ್ಲಿ ಪಶ್ಚಿಮ ವಲಯ (306) ಇದೆ. ಆರ್‌.ಆರ್‌. ನಗರ– 152, ಬೊಮ್ಮನಹಳ್ಳಿ– 131, ಯಲಹಂಕ– 73,ದಾಸರಹಳ್ಳಿ ವಲಯದಲ್ಲಿ 22 ಪಿಒಪಿ ಮೂರ್ತಿಗಳು ವಿಸರ್ಜನೆಯಾಗಿವೆ. ಪೂರ್ವ ಹಾಗೂ ಮಹದೇವಪುರ ವಲಯಲದಲ್ಲಿ ಪಿಒಪಿ ಮೂರ್ತಿಗಳು ವಿಸರ್ಜನೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT