ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬಿಬಿಎಂಪಿಯ ಪೌರಕಾರ್ಮಿಕರಿಗೆ ಸನ್ಮಾನ

Last Updated 2 ಅಕ್ಟೋಬರ್ 2022, 22:02 IST
ಅಕ್ಷರ ಗಾತ್ರ

ಬೆಂಗಳೂರು: ಗಾಂಧಿ ಜಯಂತಿ ಹಾಗೂ ಸತ್ಯ ಮತ್ತು ಅಹಿಂಸಾ ಮಹೋತ್ಸವದಲ್ಲಿ ಬಿಬಿಎಂಪಿಯ ಆರು ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಸ್ವಚ್ಛತಾ ಕಾರ್ಯದಲ್ಲಿ ಕಾರ್ಯನಿರತರಾದ ಪಶ್ಚಿಮ ವಲಯದ ನಾಗೇಂದ್ರ, ಬೊಮ್ಮನಹಳ್ಳಿ ವಲಯದ ರತ್ನಮ್ಮ, ಆರ್.ಆರ್.ನಗರ ವಲಯ್ ವೀರೇಶ್, ಪೂರ್ವ ವಲಯದ ಜಿ.ರ್. ವರಲಕ್ಷ್ಮೀ, ಮಹದೇವಪುರ ವಲಯದ ಮಹದೇವಪ್ಪ, ದಾಸರಹಳ್ಳಿ‌ ವಲಯದ ಸುಜಾತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ರಾಜಭವನದ ಗಾಜಿನಮನೆಯಲ್ಲಿ ಹಮ್ಮಿಕೊಂಡಿದ್ದ ‘ಗಾಂಧಿ ಜಯಂತಿ - ಸತ್ಯ ಮತ್ತು ಅಹಿಂಸಾ ಮಹೋತ್ಸವ’ದ ಪ್ರಯುಕ್ತ ನೃತ್ಯ ಹಾಗೂ ಗೀತನಮನ ಕಾರ್ಯಕ್ರಮಕ್ಕೆ ವಸತಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ರಾಜಭವನ, ಬಿಬಿಎಂಪಿ, ದೂರ ದರ್ಶನ ಮತ್ತು ವಾರ್ತಾ ಇಲಾಖೆ ಸಹಯೋಗದೊಂದಿಗೆ ರಾಜ್ಯದ ಪ್ರಖ್ಯಾತ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ನಾಗರಾಜ್ ಯಾದವ್, ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್, ವಿಶೇಷ ಆಯುಕ್ತ ರಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT