ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್‌ ದೀಪ’ ಗುತ್ತಿಗೆ ರದ್ದು: ಪಾಲಿಕೆಗೆ ಹೊಸ ಬೆಳಕು

ಕಾಮಗಾರಿ ವಿಳಂಬ: ಸಾರ್ವಜನಿಕರಿಂದ ದೂರು
Last Updated 7 ಜನವರಿ 2022, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾದ ‘ಸ್ಮಾರ್ಟ್‌ ಬೀದಿ ದೀಪ ಯೋಜನೆ’ಯನ್ನು ಬಿಬಿಎಂಪಿ ಕೈಬಿಟ್ಟಿದೆ. ಯೋಜನೆಯ ಅನುಷ್ಠಾನ ಆಮೆಗತಿಯಲ್ಲಿ ಸಾಗಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದ್ದರಿಂದ ಈ ಗುತ್ತಿಗೆಯನ್ನು ರದ್ದುಪಡಿಸಿರುವ ಪಾಲಿಕೆ, ಹೊಸ ಬೀದಿ ದೀಪಗಳ ಅಳವಡಿಕೆಗೆ ಟೆಂಡರ್‌ ಕರೆಯಲು ಸಿದ್ಧತೆ ನಡೆಸಿದೆ.

ವಿದ್ಯುತ್‌ ಉಳಿತಾಯ ಕ್ರಮಗಳ ಅನುಷ್ಠಾನದ ಉದ್ದೇಶದಿಂದ ಬಿಬಿಎಂಪಿಯು ಸಾಂಪ್ರದಾಯಿಕ ಬೀದಿ ದೀಪಗಳ ಬದಲು ಎಲ್‌ಇಡಿ ದೀಪಗಳನ್ನು ಅಳವಡಿಸುವ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಿತ್ತು. ಬಿಬಿಎಂಪಿಯ ಈಗಿನ ವಿದ್ಯುತ್‌ ವೆಚ್ಚದಲ್ಲಿ ಶೇ 85.5ರಷ್ಟನ್ನು ಉಳಿತಾಯ ಮಾಡುವ ಭರವಸೆ ನೀಡಿದ್ದ ಶಾಪೂರ್ಜಿ ಪಲ್ಲೋಂಜಿ ಮತ್ತು ಕಂಪನಿ, ಸಮುದ್ರ ಎಲೆಕ್ಟ್ರಾನಿಕ್ಸ್‌ ಸಿಸ್ಟಮ್ಸ್‌ ಮತ್ತು ಎಸ್‌ಎಂಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಗಳನ್ನೊಳಗೊಂಡ ಒಕ್ಕೂಟಕ್ಕೆ ಟೆಂಡರ್‌ ನೀಡಲಾಗಿತ್ತು. ಈ ಟೆಂಡರ್‌ ಪ್ರಸ್ತಾವಕ್ಕೆ 2019ರ ಫೆ.23ರಂದು ಅನುಮೋದನೆ ಸಿಕ್ಕಿತ್ತು.

ಈ ಯೋಜನೆಯನ್ನು ಒಕ್ಕೂಟವು 30 ತಿಂಗಳುಗಳಲ್ಲಿ ಐದು ಹಂತಗಳಲ್ಲಿ ಅನುಷ್ಠಾನಗೊಳಿಸಬೇಕಿತ್ತು. ಮೊದಲ ನಾಲ್ಕು ಹಂತಗಳಲ್ಲಿ ತಲಾ 1 ಲಕ್ಷ ಎಲ್‌ಇಡಿಗಳನ್ನು ಹಾಗೂ ಕೊನೆಯ ಹಂತದಲ್ಲಿ 85 ಸಾವಿರ ಎಲ್‌ಇಡಿಗಳನ್ನು ಅಳವಡಿಸಬೇಕಿತ್ತು. ಒಕ್ಕೂಟದ
ಜೊತೆ 2019ರ ಮಾರ್ಚ್‌ 1ರಂದೇ ವಿದ್ಯುತ್‌ ನಿರ್ವಹಣೆ ಗುತ್ತಿಗೆ (ಇಪಿಸಿ) ಕರಾರು ಮಾಡಿಕೊಳ್ಳಲಾಗಿತ್ತು.
ಹೊಸ ಸಂಸ್ಥೆಗಳ ಸೇರ್ಪಡೆಯ ಒಪ್ಪಂದವನ್ನೂ 2019ರ ಜೂನ್‌ 13ರಂದು ಮಾಡಿಕೊಳ್ಳಲಾಗಿತ್ತು. 2020ರ ಜೂನ್ 18ರಿಂದ ಇದರ ಅನುಷ್ಠಾನ ಕಾರ್ಯಗಳು ಪ್ರಾರಂಭವಾಗಿದ್ದವು. ಈ ಯೋಜನೆ ಅನುಷ್ಠಾನಕ್ಕೆ ‘ವಿಶೇಷ ಉದ್ದೇಶದ ಘಟಕ’ವನ್ನೂ (ಎಸ್‌ಪಿವಿ) ಸ್ಥಾಪಿಸಲಾಗಿತ್ತು.

ಒಕ್ಕೂಟವು ಮೊದಲ ಹಂತದಲ್ಲಿ ದಾಸರಹಳ್ಳಿ, ರಾಜರಾಜೇಶ್ವರಿನಗರ ಮತ್ತು ಬೊಮ್ಮನಹಳ್ಳಿ ವಲಯಗಳ ಮೂರು ವಾರ್ಡ್‌ಗಳಲ್ಲಿ ಹಾಗೂ ಪೂರ್ವ ವಲಯದ ವಸಂತನಗರ ವಾರ್ಡ್‌ನಲ್ಲಿ ಎಲ್ಇಡಿ ದೀಪಗಳನ್ನು 2021ರ ಏಪ್ರಿಲ್‌ 17ರ ಒಳಗೆ ಅಳವಡಿಸಬೇಕಿತ್ತು. ಈ ಗಡುವು ಮುಗಿದು ಅನೇಕ ತಿಂಗಳುಗಳು ಕಳೆದ ಬಳಿಕವೂ ಕಾಮಗಾರಿ ಪೂರ್ಣಗೊಳಿಸಿರಲಿಲ್ಲ.

‘ಒಕ್ಕೂಟವು ಗಡುವಿನೊಳಗೆ ಕಾಮಗಾರಿ ಅನುಷ್ಠಾನಗೊಳಿಸಿಲ್ಲ. ಹಲವಾರು ಅವಕಾಶಗಳನ್ನು ನೀಡಿದರೂ ತಿಂಗಳಾನುಗಟ್ಟಲೆ ಕಾಲಹರಣ ಮಾಡಿತು. ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ಬಂದಿದ್ದವು. ಹಾಗಾಗಿ ಅನಿವಾರ್ಯವಾಗಿ ಟೆಂಡರ್ ರದ್ದುಪಡಿಸಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

₹ 85.5 ಕೋಟಿ ಪ್ರಸ್ತಾವ ಸಲ್ಲಿಸಿದ ಪಾಲಿಕೆ

ಈ ಯೋಜನೆ ಚಾಲ್ತಿಯಲ್ಲಿರುವ ಅವಧಿಯಲ್ಲಿ ನಗರದಲ್ಲಿ ಎಲ್ಲೂ ಹೊಸತಾಗಿ ಬೀದಿ ದೀಪಗಳನ್ನು ಅಳವಡಿಸಲು ಸಾಧ್ಯವಾಗಿರಲಿಲ್ಲ. ಈ ಉದ್ದೇಶಕ್ಕೆ ಬಿಬಿಎಂಪಿ ಮೂರು ವರ್ಷಗಳ ಬಜೆಟ್‌ಗಳಲ್ಲಿ ಅನುದಾನ ಮೀಸಲಿಟ್ಟಿರಲಿಲ್ಲ. ಈಗ ಹೊಸ ಬೀದಿದೀಪಗಳನ್ನು ಅಳವಡಿಸುವ ಬಗ್ಗೆ ಬಿಬಿಎಂಪಿ ₹ 85.5 ಕೋಟಿ ವೆಚ್ಚದ ಪ್ರಸ್ತಾವ ಸಿದ್ಧಪಡಿಸಿದೆ. ಅನುದಾನ ಒದಗಿಸುವಂತೆ ಕೋರಿಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

‘ನಗರದ ಹೊರವಲಯದಲ್ಲಿ ಪಾಲಿಕೆಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ಹಾಗೂ ಈ ಹಿಂದೆ ನಗರಸಭೆಯಾಗಿದ್ದ ಪ್ರದೇಶಗಳಲ್ಲಿ ಜನವಸತಿಗಳು ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿವೆ. ಈ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಅಳವಡಿಸುವ ಅಗತ್ಯವಿದೆ’ ಎಂದು ಪ್ರಸ್ತಾವದಲ್ಲಿ ಹೇಳಲಾಗಿದೆ.

₹ 85.5 ಕೋಟಿ ಪ್ರಸ್ತಾವ ಸಲ್ಲಿಸಿದ ಪಾಲಿಕೆ

ಈ ಯೋಜನೆ ಚಾಲ್ತಿಯಲ್ಲಿರುವ ಅವಧಿಯಲ್ಲಿ ನಗರದಲ್ಲಿ ಎಲ್ಲೂ ಹೊಸತಾಗಿ ಬೀದಿ ದೀಪಗಳನ್ನು ಅಳವಡಿಸಲು ಸಾಧ್ಯವಾಗಿರಲಿಲ್ಲ. ಈ ಉದ್ದೇಶಕ್ಕೆ ಬಿಬಿಎಂಪಿ ಮೂರು ವರ್ಷಗಳ ಬಜೆಟ್‌ಗಳಲ್ಲಿ ಅನುದಾನ ಮೀಸಲಿಟ್ಟಿರಲಿಲ್ಲ. ಈಗ ಹೊಸ ಬೀದಿದೀಪಗಳನ್ನು ಅಳವಡಿಸುವ ಬಗ್ಗೆ ಬಿಬಿಎಂಪಿ ₹ 85.5 ಕೋಟಿ ವೆಚ್ಚದ ಪ್ರಸ್ತಾವ ಸಿದ್ಧಪಡಿಸಿದೆ. ಅನುದಾನ ಒದಗಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

‘ನಗರದ ಹೊರವಲಯದಲ್ಲಿ ಪಾಲಿಕೆಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ಹಾಗೂ ಈ ಹಿಂದೆ ನಗರಸಭೆಯಾಗಿದ್ದ ಪ್ರದೇಶಗಳಲ್ಲಿ ಜನವಸತಿಗಳು ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿವೆ. ಈ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಅಳವಡಿಸುವ ಅಗತ್ಯವಿದೆ’ ಎಂದು ಪ್ರಸ್ತಾವದಲ್ಲಿ ಹೇಳಲಾಗಿದೆ.

ಅಂಕಿ ಅಂಶ

53,732 – ಬಿಬಿಎಂಪಿ ಹೊಸತಾಗಿ ಅಳವಡಿಸಲಿರುವ ಬೀದಿದೀಪಗಳ ಸಂಖ್ಯೆ

511.59 ಕಿ.ಮೀ – ಹೊಸತಾಗಿ ಬೀದಿದೀಪ ಅಳವಡಿಸಲು ಗುರುತಿಸಲಾದ ಮಾರ್ಗಗಳ ಒಟ್ಟು ಉದ್ದ

ಯಾವ ವಲಯಕ್ಕೆ ಎಷ್ಟು ಬೀದಿದೀಪ ?

ವಲಯ; ಅಳವಡಿಸಬೇಕಿರುವ ಹೊಸ ಬೀದಿ ದೀಪಗಳು; ಅಂದಾಜು ವೆಚ್ಚ (₹ ಕೋಟಿ)

ಪೂರ್ವ; 2,565; 3.85

ಪಶ್ಚಿಮ; 3,408; 3.50

ದಕ್ಷಿಣ; 9,182; 8.45

ಬೊಮ್ಮನಹಳ್ಳಿ; 6,070; 23.8

ಮಹದೇವಪುರ; 8,423; 15.00

ಆರ್‌.ಆರ್‌.ನಗರ; 11,582; 15.01

ದಾಸರಹಳ್ಳಿ; 7,563; 9.69

ಯಲಹಂಕ;4,939; 6.25

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT