ಬದಲಿ ನಿವೇಶನ ಹಂಚಿಕೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರದ ಆದೇಶ
ಡಿನೋಟಿಫೈ ಬದಲಿ ಹಂಚಿಕೆಯಲ್ಲಿ ನಿಯಮ ಮೀರದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನ
ಬದಲಿ ನಿವೇಶನಗಳನ್ನು ಅದೇ ಅಥವಾ ನಂತರದ ಬಡಾವಣೆಗಳಲ್ಲಿ ನೀಡಬೇಕು. ಈ ಪ್ರಕರಣವನ್ನು ಪರಿಶೀಲಿಸುತ್ತೇನೆ
ಎನ್. ಜಯರಾಂ ಬಿಡಿಎ ಆಯುಕ್ತ
ಡಿ.ಕೆ.ಶಿವಕುಮಾರ್
ಉಪ ಮುಖ್ಯಮಂತ್ರಿ ನಿರ್ದೇಶನ ಮೀರಿದ ಬಿಡಿಎ
‘ಭೂಸ್ವಾಧೀನಪಡಿಸಿಕೊಂಡ ಜಮೀನುಗಳನ್ನು ಅಧಿಸೂಚನೆಯಿಂದ ಕೈಬಿಡುವುದು (ಡಿನೋಟಿಫೈ) ಮತ್ತು ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ನನ್ನ ಗಮನಕ್ಕೆ ತಾರದೇ ಪತ್ರ ವ್ಯವಹಾರ ನಡೆಸುವುದಾಗಲೀ, ತೀರ್ಮಾನ ಕೈಗೊಳ್ಳುವುದಾಗಲೀ ಮಾಡುವಂತಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನ ನೀಡಿದ್ದರು.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಬಿಎಂಆರ್‌ಡಿಎ ಆಯುಕ್ತ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ 2024ರ ಆಗಸ್ಟ್ 28ರಂದೇ ಪತ್ರ ಬರೆದು ಈ ಕುರಿತು ನಿರ್ದೇಶನ ನೀಡಿದ್ದರು. ಉಪ ಮುಖ್ಯಮಂತ್ರಿಯವರ ನಿರ್ದೇಶನ ಉಲ್ಲಂಘಿಸಿ ಈ ಪ್ರಕರಣದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ.