ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಮೂಲೆ ನಿವೇಶನ ಇ–ಹರಾಜು ಅವಧಿ ವಿಸ್ತರಣೆ

Last Updated 7 ಜುಲೈ 2020, 19:41 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮೂಲೆ ನಿವೇಶನಗಳ ಇ–ಹರಾಜು ಪ್ರಕ್ರಿಯೆ ವೇಳೆ ಸರ್ಕಾರದ ಇ–ಪ್ರೊಕ್ಯೂರ್‌ಮೆಂಟ್‌ ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹಾಗಾಗಿ ಇ– ಹರಾಜು ಪ್ರಕ್ರಿಯೆಯನ್ನು ಬುಧವಾರ ಸಂಜೆ 6 ಗಂಟೆವರೆಗೆ ವಿಸ್ತರಿಸಲು ಬಿಡಿಎ ನಿರ್ಧರಿಸಿದೆ.

ವಿವಿಧ ಬಡಾವಣೆಗಳಲ್ಲಿ 202 ಮೂಲೆ ನಿವೇಶನಗಳ ಇ–ಹರಾಜು ಪ್ರಕ್ರಿಯೆ ಮಂಗಳವಾರ ಸಂಜೆ 6 ಗಂಟೆಗೆ ಪ್ರಕ್ರಿಯೆ ಅಂತ್ಯವಾಗಬೇಕಿತ್ತು. 2 ಸಾವಿರಕ್ಕೂ ಅಧಿಕ ಮಂದಿ ಇ–ಹರಾಜಿನಲ್ಲಿ ಭಾಗವಹಿಸಿದ್ದರು.

‘ಸಂಜೆ 4.30 ವೇಳೆಗೆ ವೆಬ್‌ಸೈಟ್‌ ಕಾರ್ಯನಿರ್ವಹಣೆ ದಿಢೀರ್‌ ಸ್ಥಗಿತಗೊಂಡಿತು. ನಂತರ ಲಾಗಿನ್‌ ಆಗಲು ಅವಕಾಶವೇ ಸಿಗಲಿಲ್ಲ. ನನ್ನಂತೆಯೇ ನೂರಾರು ಮಂದಿಗೆ ಇದರಿಂದ ನಿರಸೆಯಾಗಿದೆ’ ಎಂದು ನಾಗರಬಾವಿಯ ನಿವಾಸಿ ರಾಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂಜಿನಿಯರಿಂಗ್‌ ಕಾಲೇಜುಗಳ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಏಕಕಾಲದಲ್ಲಿ ಪಾಲ್ಗೊಳ್ಳುತ್ತಾರೆ. ಆದರೂ ಯಾವುದೇ ಲೋಪವಿಲ್ಲದೇ ಪ್ರಕ್ರಿಯೆ ನಡೆಯುತ್ತದೆ. ಕೇವಲ 2 ಸಾವಿರ ಮಂದಿ ಪಾಲ್ಗೊಳ್ಳುವ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳಲು ಹೇಗೆ ಸಾಧ್ಯ. ಇದು ಮೊದಲಲ್ಲ. ಈ ಹಿಂದೆಯೂ ಇ–ಪ್ರೊಕ್ಯೂರ್‌ಮೆಂಟ್‌ ವೆಬ್‌ಸೈಟ್‌ನಲ್ಲಿ ದೋಷಗಳು ಕಾಣಿಸಿಕೊಂಡಿವೆ.ಕೊನೆಕ್ಷಣದಲ್ಲಿ ಈ ರೀತಿ ಆಗುತ್ತಿದ್ದು, ಇ– ಹರಾಜು ಪ್ರಕ್ರಿಯೆ ಬಗ್ಗೆಯೇ ಸಂದೇಹ ಮೂಡಿದೆ’ ಎಂದು ವಿಶ್ವೇಶ್ವರಯ್ಯ ಬಡಾವಣೆಯ ಶ್ರೀಕಂಠ ದೂರಿದರು.

‘ವೆಬ್‌ಸೈಟ್‌ ಸರಿಪಡಿಸದೇ ಇ–ಹರಾಜು ಮುಂದುವರಿಸಬಾರದು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT