ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: 240 ನಿವೇಶನಗಳ ಇ–ಹರಾಜಿನಿಂದ ₹172 ಕೋಟಿ ವರಮಾನ

Last Updated 13 ಆಗಸ್ಟ್ 2020, 13:37 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ವಿವಿಧ ಬಡಾವಣೆಗಳಲ್ಲಿರುವ 240 ನಿವೇಶನಗಳನ್ನು ಇ-ಹರಾಜು ನಡೆಸಿದ್ದು ಇದರಿಂದ ಒಟ್ಟು ₹171.99 ಕೋಟಿ ವರಮಾನ ಗಳಿಸಲಿದೆ.

ಪ್ರಾಧಿಕಾರವು ಎರಡನೇ ಹಂತದಲ್ಲಿ ಒಟ್ಟು 308 ನಿವೇಶನಗಳನ್ನು ಇ–ಹರಾಜಿಗೆ ಇಟ್ಟಿತ್ತು. ಅದರಲ್ಲಿ ಒಂದು ನಿವೇಶನದ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಿತ್ತು. ಜುಲೈ 20ರಂದು ಆರಂಭಗೊಂಡ ಇ-ಹರಾಜಿನಲ್ಲಿ ಸುಮಾರು 1,601 ಬಿಡ್ಡುದಾರರು ಭಾಗವಹಿಸಿದ್ದರು. ಒಟ್ಟು 45 ನಿವೇಶನಗಳ ಹರಾಜಿನಲ್ಲಿ ಯಾವುದೇ ಬಿಡ್ಡುದಾರರು ಭಾಗವಹಿಸಲಿಲ್ಲ. ಒಟ್ಟು 22 ನಿವೇಶನಗಳಿಗೆ ಮೂಲ ದರಕ್ಕಿಂತ ಶೇ 5ಕ್ಕಿಂತ ಕಡಿಮೆ ಮೊತ್ತವನ್ನು ಬಿಡ್ಡುದಾರರು ದಾಖಲಿಸಿದ್ದು, ಅವುಗಳು ಹರಾಜಾಗಿಲ್ಲ.

ಈ ಬಾರಿಯ ಇ–ಹರಾಜಿನಲ್ಲಿ ಬಿಡಿಎ ನಿವೇಶನಗಳು ಮೂಲದ ದರದ ಒಟ್ಟು ಮೊತ್ತ ₹103. 87 ಕೋಟಿ. ಅದಕ್ಕಿಂತ ಸರಾಸರಿ ಶೇ 65.58ರಷ್ಟು ಹೆಚ್ಚು ಮೊತ್ತಕ್ಕೆ ನಿವೇಶನಗಳು ಮಾರಾಟವಾಗಿವೆ.

ಎರಡು ಹಂತಗಳಲ್ಲಿ ನಡೆಸಿರುವ ಈ ಹರಾಜು ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಮೂರನೇ ಹಂತದ ಇ–ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆದಿದ್ದು, ಈ ಬಗ್ಗೆ ಅಧಿಸೂಚನೆಯನ್ನುಶೀಘ್ರವೇ ಹೊರಡಿಸಲಾಗುವುದು ಎಂದು ಬಿಡಿಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT