ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇನ್ನು ಮುಂದೆ ಬರವಣಿಗೆ ರೂಪದಲ್ಲಿ ನಿವೇಶನದ ವಿಸ್ತೀರ್ಣ ದಾಖಲೆಯನ್ನು ನೀಡುವುದಿಲ್ಲ. ‘ನಿಖರ ಅಳತೆ’ (ಸಿಡಿ) ಎಲೆಕ್ಟ್ರಾನಿಕ್ ರೂಪದಲ್ಲಿ ಇರಲಿದೆ. ಎರಡು ವರ್ಷದ ಹಿಂದಿನ ಯೋಜನೆ ಇದೀಗ ಜಾರಿಯಾಗಲಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಡಿಎ ಆಯುಕ್ತ ಜಿ. ಕುಮಾರ ನಾಯ್ಕ್ ಅಧಿಕಾರಿಗಳಿಗೆ ಈ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚಿಸಿದ್ದಾರೆ. ಅಲ್ಲದೆ, ‘ನಿಖರ ಅಳತೆ’ ನೀಡುವ ಅಧಿಕಾರವನ್ನು ಕಾರ್ಯಪಾಲಕ ಎಂಜಿನಿಯರ್‌ಗಳಿಂದ ಹಿಂಪಡೆದು, ಮೂರು ಸದಸ್ಯರ ಸಮಿತಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ.
ಹೊಸ ಮತ್ತು ಹಳೆಯ ಎಲ್ಲ ಬಡಾವಣೆಗಳಿಗೂ ಈ ಹೊಸ ವ್ಯವಸ್ಥೆ ಅನ್ವಯವಾಗಲಿದೆ. ನಿವೇಶನ ವಿಸ್ತೀರ್ಣದೊಂದಿಗೆ ಸುತ್ತಮತ್ತಲ ಗಡಿ ವಿವರ ಹೊಂದಿರುವ ‘ಸಿಡಿ’ ನಿವೇಶನಕ್ಕೆ ಅತಿ ಜರೂರಾದ ದಾಖಲೆಯಾಗಿದೆ.
‘2020ರಲ್ಲೇ ಎಲೆಕ್ಟ್ರಾನಿಕ್ ಸಿಡಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಕಡ್ಡಾಯವಾಗಿದ್ದರೂ ಅದನ್ನು ಯಾರೂ ಬಳಸುತ್ತಿರಲಿಲ್ಲ. ಇದನ್ನೇ ನಾವು ಮರುಜಾರಿಗೊಳಿಸುತ್ತಿದ್ದೇವೆ’ ಎಂದು ಕುಮಾರ ನಾಯ್ಕ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.