ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ‌ ಪುನಶ್ಚೇತನಕ್ಕೆ ಚಾಲನೆ

Last Updated 17 ಡಿಸೆಂಬರ್ 2020, 20:54 IST
ಅಕ್ಷರ ಗಾತ್ರ

ವೈಟ್ ಫೀಲ್ಡ್: ಬಹುದಿನಗಳ ಬೇಡಿಕೆಯಾಗಿದ್ದ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಪುನಶ್ಚೇತನ ಕಾಮಗಾರಿಗೆ ಶಾಸಕ ಅರವಿಂದ ಲಿಂಬಾವಳಿ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.

‘ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿಯಾಗಿದ್ದ ಬೆಳ್ಳಂದೂರು, ವರ್ತೂರು ಕೆರೆಗಳ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಈಗ ಉತ್ತಮ ಸ್ಥಿತಿಯಲ್ಲಿವೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಡೆಗೆ ಮುಖ ಮಾಡಲಿವೆ’ ಎಂದು ಅರವಿಂದ ಲಿಂಬಾವಳಿ ಹೇಳಿದರು.

‘ಹಲವು ಹೋರಾಟಗಳ ಬಳಿಕ ಅಭಿವೃದ್ದಿ ಕಾಮಗಾರಿಗೆ ಚಾಲನೆ ಮಾಡುವ ಮೂಲಕ ಜನರ ನಂಬಿಕೆ ಉಳಿಸಿಕೊಂಡಿರುವ ಸಂತೋಷವಿದೆ. ಬೆಳ್ಳಂದೂರು ಕೆರೆಯ ಮೊದಲ ಹಂತದ ಅಭಿವೃದ್ಧಿಯನ್ನು ₹103.66 ಕೋಟಿ ವೆಚ್ಚದಲ್ಲಿ, ವರ್ತೂರು ಕೆರೆಯನ್ನು ₹53.81 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು’ ಎಂದರು.

‘ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ 40ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಕಾರ್ಯ ನಿರಂತರವಾಗಿ ನಡೆಯಲಿದೆ. ಸುಸಜ್ಜಿತ ತಂತಿಬೇಲಿ, ನಡಿಗೆ ಪಥ, ಮಕ್ಕಳ ಉದ್ಯಾನ ನಿರ್ಮಾಣ ಕಾರ್ಯವನ್ನು ಕೆರೆ ಅಂಗಳದಲ್ಲಿ ಕೈಗೊಳ್ಳಲಾಗುವುದು’ ಎಂದರು.

ಮುಖಂಡರಾದ ಮನೋಹರ್ ರೆಡ್ಡಿ, ಜಯಚಂದ್ರರೆಡ್ಡಿ, ಸುರೇಶ್, ರಾಜಾರೆಡ್ಡಿ, ರಾಜೇಶ್, ವರ್ತೂರು ಶ್ರೀಧರ್, ಮಹೇಂದ್ರ ಮೋದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT