ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ–90 ಟ್ಯಾಂಕ್‌ಗೆ ಸಾಧನ ಪೂರೈಸಲಿದೆ ಬೆಮೆಲ್‌

Last Updated 22 ಜುಲೈ 2020, 9:17 IST
ಅಕ್ಷರ ಗಾತ್ರ

ಬೆಂಗಳೂರು: ಯುದ್ಧಭೂಮಿಯಲ್ಲಿ ಟಿ–90 ಟ್ಯಾಂಕ್‌ಗಳ ಸರಾಗ ಚಲನೆಗೆ ನೆರವು ನೀಡುವ ಸಾಧನಗಳನ್ನುಪೂರೈಸುವ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ (ಬೆಮೆಲ್‌) ಸಹಿ ಹಾಕಿದೆ. ಅಂದಾಜು ₹557 ಕೋಟಿ ಮೊತ್ತದ 1,512 ಸಾಧನಗಳನ್ನು ಬೆಮೆಲ್‌ ಪೂರೈಸಲಿದೆ.

‘ಮೇಕ್‌ ಇನ್‌ ಇಂಡಿಯಾ’ ನೀತಿ ಅಡಿಯಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇಂಗ್ಲೆಂಡ್‌ನ ಪಿಯರ್ಸನ್‌ ಎಂಜಿನಿಯರಿಂಗ್‌ ಕಂಪನಿ ಸಹಕಾರದೊಂದಿಗೆ ಈ ಸಾಧನಗಳನ್ನು ಮತ್ತು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಬೆಮೆಲ್‌ ಅಭಿವೃದ್ಧಿ ಪಡಿಸಲಿದೆ.

ಯುದ್ಧಪ್ರದೇಶಗಳಲ್ಲಿ ಸ್ಫೋಟಕಗಳನ್ನು ಅಡಗಿಸಿಟ್ಟ ಪ್ರದೇಶವನ್ನು ಅಗೆದು, ಟ್ಯಾಂಕ್‌ನ ಸರಾಗ ಚಲನೆಗೆ ಈ ಸಾಧನಗಳು ನೆರವು ನೀಡಲಿದೆ.

1,512 ಸಾಧನಗಳ ಪೈಕಿ, ವರ್ಷದೊಳಗೆ 100 ಸಾಧನಗಳನ್ನು, ನಂತರ ಪ್ರತಿ ವರ್ಷಕ್ಕೆ 250ರಂತೆ ಏಳು ವರ್ಷಗಳಲ್ಲಿ ಎಲ್ಲ ಸಾಧನಗಳನ್ನು ಬೆಮೆಲ್‌ ಪೂರೈಸಲಿದೆ.

‘ರಕ್ಷಣಾ ಇಲಾಖೆಯೊಂದಿಗೆ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಸೇನಾಪಡೆಗಳಿಗೆ ಸೇವೆ ಒದಗಿಸುವ ಅವಕಾಶ ಸಿಕ್ಕಿರುವುದು ಬೆಮೆಲ್‌ನ ಸಾಮರ್ಥ್ಯಕ್ಕೆ ಸಾಕ್ಷಿ. ಆತ್ಮನಿರ್ಭರ ಭಾರತ ಕಲ್ಪನೆಯನ್ನು ಬೆಮೆಲ್‌ ಈ ಮೂಲಕ ಸಾಕಾರಗೊಳಿಸಲಿದೆ’ ಎಂದು ಕಂಪನಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಡಾ. ದೀಪಕ್‌ಕುಮಾರ್ ಹೋಟಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT