ಬೆಂಗಳೂರು: ‘ಲಾಕ್‍ಡೌನ್‍ನಿಂದ ಶುಭ ಸಮಾರಂಭಗಳಿಗೆ ನಿರ್ಬಂಧ ಹೇರಿದ ಪರಿಣಾಮ ಕೇಟರಿಂಗ್ ವಲಯ ನೆಲ ಕಚ್ಚಿದೆ. ಈ ಕೆಲಸದಲ್ಲಿ ತೊಡಗಿದ್ದ 10 ಲಕ್ಷಕ್ಕೂ ಹೆಚ್ಚು ಮಂದಿಯ ಜೀವನ ಅತಂತ್ರವಾಗಿದೆ. ಕಾರ್ಯಕ್ರಮ ಗಳಲ್ಲಿ 50 ಮಂದಿಗೆ ಮಾತ್ರ ಅವಕಾಶ ನೀಡಿದ್ದರಿಂದ ದೇವ ಸ್ಥಾನಗಳು ಅಥವಾ ಮನೆಗಳಲ್ಲೇ ಸಮಾರಂಭಗಳು ನಡೆಯುತ್ತವೆ. ಇದರಿಂದ ಉದ್ಯೋಗಾವಕಾಶಗಳು ಸಿಗು ವುದಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಜಿ.ಕೆ.ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಒಕ್ಕೂಟದ ಕಾರ್ಯದರ್ಶಿ ರವೀಂದ್ರಕುಮಾರ್, ‘ಕೇಟರಿಂಗ್ ಉದ್ಯಮದಲ್ಲಿ ಶೇ 60ರಷ್ಟು ಮಂದಿ ವಲಸೆ ಕಾರ್ಮಿಕರಿದ್ದಾರೆ. ಕೇಟರಿಂಗ್ ಹೊರತುಪಡಿಸಿ, ಹೂವು-ಹಣ್ಣು ಬೆಳೆಗಾರರು, ಡೆಕೊರೇಟರ್ಸ್, ಲೈಟಿಂಗ್ಸ್, ವಾದ್ಯಗೋಷ್ಠಿ ಗಳಂತಹ ಅನೇಕ ವಲಯಗಳು ಇಂತಹ ಕಾರ್ಯಕ್ರಮಗಳನ್ನೇ ಅವಲಂಬಿಸಿವೆ. ಆದ್ದರಿಂದ ಸರ್ಕಾರ ಕೂಡಲೇ ಶುಭ ಸಮಾರಂಭಗಳ ಮೇಲೆ ಹೇರಿರುವ ನಿಯಮಾವಳಿಗಳನ್ನು ಸಡಿಲಿಸಬೇಕು’ ಎಂದರು.

ಪಾದರಾಯನಪುರ ದಾಂದಲೆ: ಆರೋಪಿಗಳ ಬಿಡುಗಡೆ
ಬೆಂಗಳೂರು: ಪಾದರಾಯನಪುರದಲ್ಲಿ ದಾಂದಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ 126 ಮಂದಿ ಬುಧವಾರ ಬಿಡುಗಡೆಗೊಂಡು ಮರಳಿದಾಗ ಸ್ವಾಗತಿಸಲು ಸ್ಥಳೀಯರ ದಂಡೇ ಸೇರಿತ್ತು.

ಆರೋಪಿಗಳಿಗೆ ಹೈಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ನೀಡಿತ್ತು. ಹಜ್ ಭವನದಿಂದ ಹಳೇ ಗುಡ್ಡದಹಳ್ಳಿಗೆ ಆರೋಪಿಗಳು ತೆರಳಲು ಚಾಮ ರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ನ್ಯಾಷನಲ್ ಟ್ರಾವೆಲ್ಸ್‌ನ ಮೂರು ಬಸ್‌ಗಳನ್ನು ನೀಡಿದ್ದರು. ಬಿಡುಗಡೆಯ ವೇಳೆ ಸ್ಥಳದಲ್ಲಿದ್ದ ಜಮೀರ್, ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಆರೋಪಿಗಳಿಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.