ಸಿಬ್ಬಂದಿ ಕೊರತೆ; ಮಾಹಿತಿ ಕೇಳಿದ ಕಮಿಷನರ್

ಭಾನುವಾರ, ಮೇ 26, 2019
33 °C

ಸಿಬ್ಬಂದಿ ಕೊರತೆ; ಮಾಹಿತಿ ಕೇಳಿದ ಕಮಿಷನರ್

Published:
Updated:

ಬೆಂಗಳೂರು: ನಗರದ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದ್ದು, ಮೂರ್ನಾಲ್ಕು ಮಂದಿ ಮಾಡುವ ಕೆಲಸವನ್ನು ಒಬ್ಬರೇ ಮಾಡಬೇಕಾದ ಸ್ಥಿತಿ ಇದೆ. ಸಿಬ್ಬಂದಿ ಕೊರತೆ ನೀಗಿಸುವುದಕ್ಕಾಗಿ ಹೊಸ ನೇಮಕಾತಿ ನಡೆಸಲು ಗೃಹ ಇಲಾಖೆ ತಯಾರಿ ನಡೆಸಿದೆ.

ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಹಾಗೂ ಅಗತ್ಯವಿರುವ ಸಿಬ್ಬಂದಿ ಬಗ್ಗೆ ಮಾಹಿತಿ ನೀಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ಬೆಂಗಳೂರು ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.

ಅದರನ್ವಯ ಸುನೀಲ್‌ಕುಮಾರ್, ನಗರದ 147 ಠಾಣೆಗಳ ಸಿಬ್ಬಂದಿ ಸಂಖ್ಯಾಬಲದ ಬಗ್ಗೆ ಮಾಹಿತಿ ಕಳುಹಿಸುವಂತೆ ಆಯಾ ಉಪವಿಭಾಗದ ಡಿಸಿಪಿಗಳಿಗೆ ಹೇಳಿದ್ದಾರೆ.

ಭದ್ರತೆಗೆ ಹೆಚ್ಚು ಸಿಬ್ಬಂದಿ: ‘ರಾಜಧಾನಿಯಲ್ಲಿ ನಿತ್ಯವೂ ಪ್ರತಿಭಟನೆ, ಗಣ್ಯರ ಆಗಮನ, ಸಭೆ– ಸಮಾರಂಭ ಇದ್ದೇ ಇರುತ್ತವೆ. ಅಲ್ಲೆಲ್ಲ ಭದ್ರತೆ ಒದಗಿಸಲು ಹೆಚ್ಚಿನ ಸಿಬ್ಬಂದಿ ಬೇಕಾಗುತ್ತದೆ. ಅಪರಾಧ ಕೃತ್ಯಗಳ ಆರೋಪಿಗಳನ್ನು ಬಂಧಿಸಲು ಹಾಗೂ ಪ್ರಕರಣಗಳ ತನಿಖೆ ನಡೆಸಲು ಸಿಬ್ಬಂದಿ ಕೊರತೆ ಇದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ‘ನಗರದ 145 ಠಾಣೆಗಳ ಪೈಕಿ ಬಹುಪಾಲು ಠಾಣೆಯ ಸಿಬ್ಬಂದಿಗೆ ವಾರದ ರಜೆಯೂ ಸಿಗುತ್ತಿಲ್ಲ. ಲೋಕಸಭಾ ಚುನಾವಣೆ ವೇಳೆ ಯಾರೊಬ್ಬರಿಗೂ ರಜೆ ಸಿಕ್ಕಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !