ಬೆಂಗಳೂರು: ಮನೆಯಲ್ಲಿ ಕಳ್ಳತನ ಮಾಡಿದ್ದ ಮುಂಬೈನ ಆಟೊ ಚಾಲಕ ಸೇರಿ ಇಬ್ಬರನ್ನು ಬಂಧಿಸಿರುವ ಯಲಹಂಕ ಪೊಲೀಸರು, ₹16 ಲಕ್ಷ ಮೌಲ್ಯದ 180 ಗ್ರಾಂ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ.

ಮಹಾರಾಷ್ಟ್ರದ ಮುಂಬೈನ ಜೇಮ್ಸ್ ಜಫ್ರಿನ್ (39) ಹಾಗೂ ಸಲಾವುದ್ದೀನ್ ಶೇಖ್(29) ಬಂಧಿತರು. ಮಹಾರಾಷ್ಟ್ರದ ಓಶಿವಾರದಲ್ಲಿನ ನಿವಾಸದಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಠಾಣಾ ವ್ಯಾಪ್ತಿಯ ಪ್ರಕೃತಿನಗರದ ವೇಣುಪ್ರಸಾದ್ ಅವರು ಫೆಬ್ರುವರಿ 6ರಂದು ಕೆಲಸ ಮುಗಿಸಿ ಸಂಜೆ ಫ್ಲ್ಯಾಟ್ಗೆ ಬಂದು ನೋಡಿದಾಗ ಬೀರುವಿನಲ್ಲಿದ್ದ 250 ಗ್ರಾಂ ಚಿನ್ನ, ಬೆಳ್ಳಿ ವಸ್ತುಗಳು ಹಾಗೂ ನಗದು ಕಳವಾಗಿದ್ದವು.

ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಸೂರತ್ ಸಿಟಿ ಸೆಂಟ್ರಲ್ ಜೈಲಿನಲ್ಲಿದ್ದ ಆರೋಪಿಗಳನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕದ್ದ ಚಿನ್ನಾಭರಣಗಳನ್ನು ಕರಗಿಸಿ, ಗಟ್ಟಿ ಮಾಡಿ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಸೂರತ್ ಸಿಟಿ ಸೆಂಟ್ರಲ್ ಜೈಲಿಗೆ ಬಿಡಲಾಗಿದೆ ಎಂದು ತಿಳಿಸಿದರು.

ಮೊಬೈಲ್ ಕಳ್ಳರು ಸೆರೆ: ಮೊಬೈಲ್ ಸರ್ವಿಸ್ ಅಂಗಡಿಯ ಬೀಗ ಮುರಿದು ಕಳವು ಮಾಡಿದ ಹೊರ ರಾಜ್ಯದ ಇಬ್ಬರನ್ನು ಬಂಧಿಸಿ ₹1.40 ಲಕ್ಷ ಮೌಲ್ಯದ 14 ಮೊಬೈಲ್ಗಳು, ಒಂದು ಲ್ಯಾಪ್ಟಾಪ್ ಅನ್ನು ಯಲಹಂಕ ಪೊಲೀಸರು ಜಪ್ತಿ ಮಾಡಿದ್ದಾರೆ.

ಒಡಿಶಾ ಮೂಲದ ಜಿಗಣಿಯ ಜನತಾ ಲೇಔಟ್ನ ರಾಧಾ ಕೃಷ್ಣಕಾಂತ್ ಮಲ್ಲಿಕ್ (20) ಹಾಗೂ ಲಿಪನ್ ಕುಮಾರ್ ಮಲ್ಲಿಕ್ (21)ಬಂಧಿತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.