ಶುಕ್ರವಾರ, ಮಾರ್ಚ್ 24, 2023
31 °C

ರೇನ್‌ಬೋ ಡ್ರೈವ್ ಬಡಾವಣೆ ಮನೆಗಳಲ್ಲಿ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆಯಿಂದಾಗಿ ಇತ್ತೀಚೆಗೆ ನೀರು ನುಗ್ಗಿದ್ದ ರೇನ್‌ಬೋ ಡ್ರೈವ್ ಬಡಾವಣೆಯ ಮೂರು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

‘ಬಡಾವಣೆಯಲ್ಲಿ ಮಳೆ ನೀರು ನುಗ್ಗಿದ್ದರಿಂದ ನಿವಾಸಿಗಳು ಕಷ್ಟಕ್ಕೆ ಸಿಲುಕಿದ್ದರು. ಅಗತ್ಯ ವಸ್ತುಗಳ ಸಮೇತವಾಗಿ ಅವರನ್ನು ಮನೆಗಳಿಂದ ಹೊರಗೆ ಕರೆತಂದು ರಕ್ಷಿಸಲಾಗಿತ್ತು. ಬಡಾವಣೆಯ ಬಹುತೇಕ ಮನೆಗಳಲ್ಲಿ ಯಾರೂ ಇರಲಿಲ್ಲ. ಇದೇ ಸಂದರ್ಭದಲ್ಲೇ ಕಳ್ಳರು ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿರುವ ಮಾಹಿತಿ ಇದೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ನೀರು ಕಡಿಮೆಯಾದ ನಂತರ ಮಾಲೀಕರು ಮನೆಗೆ ಹೋಗಿದ್ದರು. ಈ ವೇಳೆ ಪರಿಶೀಲಿಸಿದಾಗ ಕಳ್ಳತನ ಗಮನಕ್ಕೆ ಬಂದಿದೆ. ಮನೆಗಳ ಬಾಗಿಲು ಮೀಟಿ ಹಾಗೂ ಕಿಟಕಿ ಮೂಲಕ ಒಳಗೆ ನುಗ್ಗಿರುವ ಕಳ್ಳರು ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಕದ್ದೊಯ್ದಿರುವುದಾಗಿ ಗೊತ್ತಾಗಿದೆ. ಕಳವಾದ ವಸ್ತುಗಳ ಮೌಲ್ಯ ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ತಿಳಿಸಿದರು.

‘ಬಡಾವಣೆಯಲ್ಲೆಲ್ಲ ನೀರು ನಿಂತಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳೂ ನಿಷ್ಕ್ರಿಯಗೊಂಡಿದ್ದವು. ಹೀಗಾಗಿ, ಸದ್ಯಕ್ಕೆ ಆರೋಪಿಗಳ ಸುಳಿವು ಸಿಕ್ಕಿಲ್ಲ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು