ಬೆಂಗಳೂರು: ಕೆಎಸ್ಆರ್ಟಿಸಿ, ಬಿಎಂಟಿಸಿ ಹಾಗೂ ಖಾಸಗಿ ಬಸ್, ಆಟೊ, ಕ್ಯಾಬ್ಗಳಲ್ಲಿ ಲಗೇಜ್ಗಳ ಒಳಗೆ ನೈಸರ್ಗಿಕ ಹಾಗೂ ಸಿಂಥೆಟಿಕ್ ಡ್ರಗ್ಸ್ ಅನ್ನು ಆರೋಪಿಗಳು ಬಚ್ಚಿಟ್ಟು ಸಾಗಣೆ ಮಾಡುತ್ತಿರುವ ಶಂಕೆಯ ಮೇರೆಗೆ ಪಶ್ಚಿಮ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಶ್ವಾನದಳದೊಂದಿಗೆ ಸೋಮವಾರ ಶೋಧ ಕಾರ್ಯಾಚರಣೆ ನಡೆಸಿದರು.

ಖಾಸಗಿ ವಾಹನಗಳಲ್ಲಿ ಆರೋಪಿಗಳು ಎಂಡಿಎಂಎ ಕ್ರಿಸ್ಟಲ್, ಕೊಕೇನ್, ಗಾಂಜಾವನ್ನು ಲಗೇಜ್ ಬ್ಯಾಗ್ಗಳಲ್ಲಿ ಬಟ್ಟೆಯ ಮಧ್ಯೆ ಬಚ್ಚಿಟ್ಟು ಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಾತ್ಮೀದಾರದಿಂದ ಸಿಕ್ಕಿತ್ತು. ಆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯಕ್ಕೆ ಯಾವುದೇ ರೀತಿಯ ವಸ್ತುಗಳು ಪತ್ತೆಯಾಗಿಲ್ಲ. ಬಸ್ಗಳಲ್ಲಿ ಲಗೇಜ್ ಇಡುವ ಸ್ಥಳದಲ್ಲಿದ್ದ ಮೂಟೆಗಳು, ಬ್ಯಾಗ್, ಟ್ರಾಲಿ ಬ್ಯಾಗ್ಗಳನ್ನು ತಪಾಸಣೆ ನಡೆಸಲಾಯಿತು ಎಂದು ಪೊಲೀಸರು ಹೇಳಿದರು.

‘ಖಾಸಗಿ ಬಸ್ ನಿಲ್ದಾಣಗಳಲ್ಲಿ ಲಗೇಜ್ ಕೊಠಡಿಗಳಿವೆ. ಅಲ್ಲಿಯೂ ತಪಾಸಣೆ ನಡೆಸಲಾಗಿದೆ. ಮೆಜೆಸ್ಟಿಕ್ ಸುತ್ತಮುತ್ತ, ಆನಂದ್ರಾವ್ ವೃತ್ತದಲ್ಲಿ ನಿಲುಗಡೆ ಮಾಡಿದ್ದ ವಾಹನಗಳಲ್ಲಿ ತಪಾಸಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯನ್ನು ಇನ್ನೂ ಒಂದುವಾರ ಮುಂದುವರಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.