ಬೆಂಗಳೂರು: ಜಿಮ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ವಿನಯಾ ಕುಮಾರಿ (44) ಅವರ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ‘ಮಿದುಳು ರಕ್ತಸ್ರಾವವೇ ಸಾವಿಗೆ ಕಾರಣ’ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

‘ನಗರದ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿನಯಾಕುಮಾರಿ, ಅವಿವಾಹಿತೆ. ಮಲ್ಲೇಶಪಾಳ್ಯದಲ್ಲಿ ವಾಸವಿದ್ದರು. ಮನೆ ಸಮೀಪದ ಜಿಮ್‌ನಲ್ಲಿ ಮಾರ್ಚ್ 26ರಂದು ಕಸರತ್ತು ನಡೆಸುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದರು’ ಎಂದು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಹೇಳಿದರು.

‘ಸಾವಿನ ಬಗ್ಗೆ ಹಲವು ಅನುಮಾನಗಳು ಇದ್ದವು. ಮರಣೋತ್ತರ ಪರೀಕ್ಷೆ ನಡೆಸಿದ್ದ ಸಿ.ವಿ. ರಾಮನ್ ಆಸ್ಪತ್ರೆ ವೈದ್ಯರು ವರದಿ ನೀಡಿದ್ದಾರೆ. ಕಸರತ್ತು ಮಾಡುವ ವೇಳೆ ರಕ್ತದೊತ್ತಡ ಹೆಚ್ಚಾಗಿ, ಮಿದುಳಿನ ರಕ್ತನಾಳಗಳು ಒಡೆದಿದ್ದವು. ಅಲ್ಲಿಯೇ ರಕ್ರಸ್ರಾವವಾಗಿದ್ದರಿಂದ ವಿನಯ್‌ಕುಮಾರ್ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ವರದಿಯಲ್ಲಿ ಹೇಳಲಾಗಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.