ಬೆಂಗಳೂರು: ಇತಿಹಾಸ ಪ್ರಸಿದ್ಧ ‘ಬೆಂಗಳೂರು ಕರಗ’ದ ಮುನ್ನಾ ದಿನ ಶುಕ್ರವಾರ ಹಸಿ ಕರಗದ ಮೆರವಣಿಗೆ, ಪೂಜೆ, ಆರತಿಗಳು ವಿಜೃಂಭಣೆಯಿಂದ ನಡೆದವು. ಶನಿವಾರ ರಾತ್ರಿ ಕರಗ ನಡೆಯಲಿದ್ದು, ಧರ್ಮರಾಯಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪೇಟೆಗಳಲ್ಲಿ ಹಸಿರು ತೋರಣ, ಮಲ್ಲಿಗೆ ಹೂವಿನ ಘಮ ಪಸರಿಸಿದೆ.

ಸಂಪಂಗಿ ಕೆರೆಯ ಕರಗದ ಕುಂಟೆಯಲ್ಲಿರುವ ಶಕ್ತಿ ಪೀಠದಲ್ಲಿ ಗುರುವಾರ ರಾತ್ರಿಯಿಂದ ಹಸಿ ಕರಗದ ಪೂಜಾ ವಿಧಿಗಳು, ಧಾರ್ಮಿಕ ಆಚರಣೆಗಳು ನಡೆದವು. ಶುಕ್ರವಾರ ನಸುಕಿನಲ್ಲಿ ಹಸಿ ಕರಗ ಸಿದ್ಧಗೊಂಡಿತು. ವಿಶೇಷ ಪೂಜೆಯ ನಂತರ, ಹೂವಿನ ವೇಷಭೂಷಣದೊಂದಿಗೆ ಸಿದ್ಧರಾದ ಅರ್ಚಕ ಎ. ಜ್ಞಾನೇಶ್ ಒಂದು ಕೈಯಲ್ಲಿ ಕತ್ತಿ ಹಿಡಿದು, ಸೊಂಟದಲ್ಲಿ ಹಸಿ ಕರಗವನ್ನು ಹೊತ್ತು ಸಾಗಿದರು.

ಸಂಪಂಗಿ ಕೆರೆಯಿಂದ ಹಡ್ಸನ್ ವೃತ್ತದತ್ತ ಸಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ಹಸಿ ಕರಗದ ಪೂಜೆ ನಡೆಯಿತು. ಮೆರವಣಿಗೆಯುದ್ಧಕ್ಕೂ ನೂರಾರು ವೀರಕುಮಾರರು ಸಾಗಿದರು. ಧರ್ಮರಾಯಸ್ವಾಮಿ ದೇವಸ್ಥಾನದ ಅಂಗಳದಲ್ಲಿ ವೀರಕುಮಾರರು ಧಾರ್ಮಿಕ ಸಂಪ್ರದಾಯಗಳನ್ನು ನೆರವೇರಿಸಿದರು. ವಿಶೇಷ ಪೂಜೆಯ ನಂತರ ಶುಕ್ರವಾರ ಮುಂಜಾನೆ, ಧರ್ಮರಾಯಸ್ವಾಮಿ ದೇವಸ್ಥಾನದ ಒಳಭಾಗವನ್ನು ಹಸಿ ಕರಗ ತಲುಪಿತು.

ಶನಿವಾರ ಹೂವಿನ ಕರಗ: ಪ್ರಸಿದ್ಧ ದ್ರೌಪದಿದೇವಿ ಕರಗ ಶಕ್ತೋತ್ಸವ (ಬೆಂಗಳೂರು ಕರಗ) ಚೈತ್ರ ಪೌರ್ಣಿಮಯಾದ ಏಪ್ರಿಲ್ 12ರ ಶನಿವಾರ ನಡೆಯಲಿದೆ. ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಜೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಪೂಜಾ ವಿಧಿಗಳನ್ನು ಪೂರೈಸಿದ ನಂತರ ಜ್ಞಾನೇಂದ್ರ ಅವರು ಶನಿವಾರ ತಡರಾತ್ರಿ ಕರಗ ಹೊತ್ತು ಸಾಗಲಿದ್ದಾರೆ. ಜ್ಞಾನೇಂದ್ರ ಅವರು 15ನೇ ಬಾರಿ ಕರಗವನ್ನು ಹೊರಲಿದ್ದಾರೆ.

ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಬರುವ ಕರಗ, ಗಣಪತಿ ಮತ್ತು ಮುತ್ಯಾಲಮ್ಮ ದೇವಾಲಯ, ಹಲಸೂರು ಪೇಟೆಯ ಆಂಜನೇಯಸ್ವಾಮಿ, ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯಿಂದ ಕೆ.ಆರ್. ಮಾರುಕಟ್ಟೆ ತಲುಪಲಿದೆ. ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯ, ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಸಾಗಲಿದೆ. ಭಾನುವಾರ ಸೂರ್ಯೋದಯದ ಮುನ್ನ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಕರಗ ಹಿಂದಿರುಗಲಿದೆ.

ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಹೊರಟ ಬಳಿಕ ಧರ್ಮರಾಯಸ್ವಾಮಿ ಮಹಾರಥೋತ್ಸವ ಆರಂಭವಾಗಲಿದೆ. ಇದರ ಹಿಂದೆ, ನಗರದ ಹಲವು ಭಾಗಗಳಲ್ಲಿರುವ ದೇವಸ್ಥಾನಗಳಿಂದ ಬರುವ ಪಲ್ಲಕ್ಕಿಗಳು ಸಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.