ಗುಂಡಿ ಬಿದ್ದಿರುವ ಗುಂಜೂರು ರಸ್ತೆಯಲ್ಲಿ ವಾಹನ ಸಂಚಾರ
ಬಳಗೆರೆ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ಬಳಗೆರೆ ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿ ನಡೆಯುತ್ತಿದೆ.
ಪಣತ್ತೂರು ಸರ್ಕಲ್ ಬಳಿ ಪಾದಚಾರಿ ಮಾರ್ಗವನ್ನು ಬ್ಯಾರಿಕೇಡ್‌ನಿಂದ ಮುಚ್ಚಲಾಗಿದೆ. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

ಮೂರು ವರ್ಷದಿಂದ ಈ ರಸ್ತೆ ಹಾಳಾಗಿದ್ದರೂ ಕೇಳುವವರು ಯಾರೂ ಇಲ್ಲ. ಶಾಶ್ವತವಾದ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿದರೆ ಪ್ರತಿ ವರ್ಷವೂ ಗುಂಡಿ ಮುಚ್ಚುವುದಕ್ಕೆ ಹಣ ವ್ಯಯಿಸುವುದು ತಪ್ಪುತ್ತದೆ. ಮುಚ್ಚಿದ ಗುಂಡಿಗಳು ಸ್ವಲ್ಪ ದಿನಗಳಲ್ಲೆ ಮತ್ತೆ ಬಾಯ್ತೆರೆಯುತ್ತವೆ. ಅದರ ಅಕ್ಕಪಕ್ಕದಲ್ಲೂ ಗುಂಡಿಗಳು ಬೀಳುತ್ತವೆ. ಮಳೆಗೆ ರಸ್ತೆಗಳು ಹೊಂಡಮಯವಾಗುತ್ತಿವೆ.
ಗಿರೀಶ್ ಕಾರು ಚಾಲಕ, ಬಳಗೆರೆ
ಇದನ್ನು ಯಾರಾದರೂ ರಸ್ತೆ ಎನ್ನುತ್ತಾರೆಯೇ? ಪಶ್ಚಿಮ ಬಂಗಾಳದಿಂದ ಬಂದು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ಧೇನೆ. ನಮ್ಮ ಹಳ್ಳಿಯ ರಸ್ತೆಗಳು ಎಷ್ಟೋ ಚೆನ್ನಾಗಿವೆ. ಅರ್ಧ ಗಂಟೆಯಲ್ಲಿ ಕಚೇರಿಗೆ ಹೋಗುತ್ತಿದ್ದೆ. ಆದರೆ ಈಗ ಗುಂಡಿ ಬಿದ್ದಿರುವ ಕಾರಣ ಎರಡು ತಾಸು ಬೇಕಾಗಿದೆ. ಮಳೆ ಬಂದಾಗೆಲ್ಲ ಗುಂಡಿಗಳಲ್ಲಿ ನೀರು ನಿಂತು ಓಡಾಡಲು ಆಗುವುದಿಲ್ಲ. ಕಂಪನಿಗಳು ಇಲ್ಲಿಂದ ಹೊರ ರಾಜ್ಯಕ್ಕೆ ಹೋಗುತ್ತವೆ.
ಗೌರವ ಸಾಫ್ಟ್‌ವೇರ್ ಉದ್ಯೋಗಿ ಪಣತ್ತೂರು ರಸ್ತೆ
ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿರುವುದರಿಂದ ವಿಪರೀತ ದೂಳು ಏಳುತ್ತದೆ. ದೊಡ್ಡ ವಾಹನಗಳು ಸಂಚರಿಸುತ್ತಿದ್ದರೆ ಹಿಂದಿನವರೆಗೆ ರಸ್ತೆ ಕಾಣದಷ್ಟು ದೂಳು ಆವರಿಸಿಕೊಳ್ಳುತ್ತದೆ. ರಸ್ತೆ ಅಕ್ಕಪಕ್ಕ ಅಂಗಡಿ–ಮಳಿಗೆಗಳು ವ್ಯಾಪಾರಿಗಳು ಹಾಗೂ ನಿವಾಸಿಗಳ ಗೋಳು ಹೇಳತೀರದು. ಮೊದಲು ರಸ್ತೆ ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕು.
ಭಾಗವತ್ ವ್ಯಾಪಾರಿ
ಹೊಂಡದಲ್ಲಿ ಸಿಲುಕಿದ ವಾಹನಗಳು ನಾಲ್ಕು ವರ್ಷದಿಂದ ಈ ರಸ್ತೆ ಹಾಳಾಗಿದೆ. ವಿಪರೀತ ದೂಳು ಹಾಗೂ ಗುಂಡಿಗಳು ಬಿದ್ದಿವೆ. ಪಕ್ಕದಲ್ಲಿರುವ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಗಲೀಜು ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲ. ಹೊಂಡಗಳಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ. ಕೆಲವರು ಬಿದ್ದು ಗಾಯಗೊಂಡಿರುವ ಉದಾಹರಣೆಯೂ ಇದೆ. ದೂಳು ವಿಪರೀತವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಸೈಯದ್ ಪಾಷಾ ಚಿಕನ್ ವ್ಯಾಪಾರಿ ಗುಂಜೂರು ಪಾಳ್ಯ