ದುಬೈ: ‘ಜನರ ನಡುವೆ, ವ್ಯಾಪಾರ–ವಹಿವಾಟು ಇತ್ಯಾದಿಗಳಲ್ಲಿ ‘ಪೈಪೋಟಿ ಅಥವಾ ವೈರತ್ವ’ ನಡೆಯುತ್ತದೆ. ಅಲ್ಲಿ ಸ್ಪರ್ಧೆಗಿಳಿದವರು ಒಂದೇ ಗುರಿಸಾಧನೆಯತ್ತ ಚಿತ್ತ ನೆಟ್ಟಿರುತ್ತಾರೆ’

–ವೈರತ್ವ ಪದಕ್ಕೆ ಕೇಂಬ್ರಿಜ್ ನಿಘಂಟಿನಲ್ಲಿ ಈ ರೀತಿಯ ವ್ಯಾಖ್ಯಾನ ಇದೆ. ಸಮಬಲಶಾಲಿಗಳ ನಡುವೆ ಒಂದು ‘ಪ್ರಶಸ್ತಿ’ಗಾಗಿ ಪೈಪೋಟಿ ಏರ್ಪಡುತ್ತದೆ ಎಂಬುದಷ್ಟೇ ಇದರ ಭಾವಾರ್ಥ. ಈ ಸಂಗತಿಯನ್ನು ಕೆಲವರು ಪಿಸುಗುಡುತ್ತಿದ್ದರೆ, ಇನ್ನೊಂದಿಷ್ಟು ಜನ ಸಾಮಾಜಿಕ ಜಾಲತಾಣಗಳ ಮೂಲಕ ಘಂಟಾಘೋಷವಾಗಿ ಹೇಳುತ್ತಿದ್ದಾರೆ.

ಇದೀಗ ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಈ ‘ಪ್ರಹಸನ’ದ ಮೇಲಿನ ಪರದೆಯನ್ನು ಕಿತ್ತು ಬೀಸಾಕಿದ್ದಾರೆ.

‘ಭಾರತ ಮತ್ತು ಪಾಕ್ ಪಂದ್ಯವನ್ನು ವೈರತ್ವದ ಹಣಾಹಣಿಯೆಂದು ಕರೆಯದಿರಿ. ಅದೆಲ್ಲವೂ ಈಗ ಇತಿಹಾಸದ ಪುಟಗಳನ್ನು ಸೇರಿದೆ. ಆದರೆ ಈಗ ಭಾರತಕ್ಕೆ ಪಾಕ್ ಸಮಬಲದ ಪ್ರತಿಸ್ಪರ್ಧಿಯಲ್ಲ’ ಎಂದು ಸೂರ್ಯ ಘೋಷಿಸಿದ್ದಾರೆ.

ಈ ಕುರಿತ ಮೂಲಸಂಗತಿಗಳನ್ನು ಪರಿಗಣಿಸಿದರೆ; 2022ರ ಅಕ್ಟೋಬರ್ನಲ್ಲಿ ಮೆಲ್ಬರ್ನ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಮುಖಾಮುಖಿಯಿಂದ ಇಲ್ಲಿಯವರೆಗೆ ಭಾರತವು ಪಾಕ್ ವಿರುದ್ಧ 7–0 ಜಯದ ದಾಖಲೆ ಹೊಂದಿದೆ. ಏಕದಿನ ಕ್ರಿಕೆಟ್ನಲ್ಲಿ ಮೂರು ಭರ್ಜರಿ ಜಯಗಳು. 2023ರಲ್ಲಿ ತವರಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತು. ಹೋದ ವರ್ಷ ಟಿ20 ವಿಶ್ವಕಪ್ ವಿಜಯಿಯಾಗಿತ್ತು. ಅಲ್ಲದೇ ಏಕದಿನ ಕ್ರಿಕೆಟ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿರುವ ತಂಡವು ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನವನ್ನು ಪಡೆದಿತ್ತು. ಒಟ್ಟಾರೆ ಕಳೆದ ಮೂರು ನಿಗದಿಯ ಓವರ್ಗಳ ವಿಶ್ವ ಕ್ರಿಕೆಟ್ ಟೂರ್ನಿಗಳಲ್ಲಿ ಎರಡರಲ್ಲಿ ಚಾಂಪಿಯನ್ ಆಗಿ, ಒಂದರಲ್ಲಿ ಮಾತ್ರ ಸೋತಿದೆ.

ಆದರೆ ಪಾಕ್ ತಂಡವು ಈ ಮೂರೂ ಟೂರ್ನಿಗಳಲ್ಲಿ ನಾಕೌಟ್ ಕೂಡ ಪ್ರವೇಶಿಸಿಲ್ಲ. ಏಕದಿನ ರ್ಯಾಂಕಿಂಗ್ನಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಚಲನಚಿತ್ರಗಳಲ್ಲಿ ನಟ–ನಟಿಯರು ದೃಶ್ಯಗಳಿಗೆ ತಕ್ಕಂತೆ ತಮ್ಮ ಬಟ್ಟೆಗಳನ್ನು ಬದಲಾಯಿಸುವ ರೀತಿಯಲ್ಲಿ ಪಾಕ್ ತಂಡವು ನಾಯಕರನ್ನು ಬದಲಿಸಿದೆ. ಆದರೆ ವೈಫಲ್ಯ ಮಾತ್ರ ಮುಂದುವರಿಯಿತು.

ಉಭಯ ತಂಡಗಳ ಗಟ್ಟಿ ಪೈಪೋಟಿಗಳು ಕುರಿತು ಮಾತನಾಡುವುದಾದರೆ; 1986ರ ಏಪ್ರಿಲ್ನಲ್ಲಿ ಶಾರ್ಜಾದಲ್ಲಿ ನಡೆದಿದ್ದ ಆಸ್ಟ್ರೇಲಿಯಾ–ಏಷ್ಯಾ ಕಪ್ ಫೈನಲ್ ಪಂದ್ಯ ಉದಾಹರಣೆಯಾಗುತ್ತದೆ. ಭಾರತದ ವೇಗಿ ಚೇತನ್ ಶರ್ಮಾ ಹಾಕಿದ ಆ ಪಂದ್ಯದ ಕೊನೆಯ ಎಸೆತದಲ್ಲಿ ಜಾವೇದ್ ಮಿಯಾಂದಾದ್ ಸಿಕ್ಸರ್ಗೆತ್ತಿದರು. ಅದು ಕ್ರಿಕೆಟ್ ವಲಯದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ಸಿಕ್ಸರ್ ಆಯಿತು. ಮಿಯಾಂದಾದ್ ವೃತ್ತಿಜೀವನ ಮುಗಿಸಿದ ನಂತರದ 16 ವರ್ಷಗಳಲ್ಲಿ ಪಾಕ್ ತಂಡವು ಭಾರತದೊಂದಿಗಿನ 68 ಪಂದ್ಯಗಳಲ್ಲಿ 44 ಪಂದ್ಯಗಳಲ್ಲಿ (21 ಸೋಲುಗಳು) ಜಯಗಳಿಸಿತ್ತು.

ನಂತರದ ಬೆಳವಣಿಗೆಗಳಲ್ಲಿ ಶಕ್ತಿಕೇಂದ್ರ ಬದಲಾಗಿರುವುದು ನಿಸ್ಸಂಶಯ. 2003ರ ವಿಶ್ವಕಪ್ ಟೂರ್ನಿಯಿಂದ ಭಾರತವು ಏಕದಿನ ಕ್ರಿಕೆಟ್ನಲ್ಲಿ 29–21ರ ಮುನ್ನಡೆ ಸಾಧಿಸಿತು. ಆದರೆ 2013ರ ಜನವರಿ 6ರಂದು ಉಭಯ ತಂಡಗಳ ದ್ವಿಪಕ್ಷೀಯ ಪಂದ್ಯವು ಕೊನೆಯ ಬಾರಿಗೆ ನಡೆಯಿತು.

ಭಾರತವು 12 ಏಕದಿನ ಪಂದ್ಯಗಳಲ್ಲಿ 9-2 ಮತ್ತು ಹತ್ತು ಟಿ20 ಪಂದ್ಯಗಳಲ್ಲಿ 8-2 ದಾಖಲೆಗಳೊಂದಿಗೆ ಸಮಗ್ರವಾಗಿ ಉತ್ತಮ, ಹೆಚ್ಚು ಪ್ರಬಲ ತಂಡವಾಗಿದೆ. ಪಾಕಿಸ್ತಾನದ ಗೆಲುವುಗಳು ಅಸಮಾಧಾನದ ಬಣ್ಣವನ್ನು ಪಡೆದುಕೊಂಡಿವೆ. ಭಾರತದ ಗೆಲುವುಗಳು ನಿರೀಕ್ಷಿತವಾಗಿದ್ದವು. ನಿಕಟ ಸ್ಪರ್ಧೆಗಳು ತುಂಬಾ ಕಡಿಮೆ ಆಗಿವೆ. ಗುಣಮಟ್ಟ, ಚುರುಕುತನ, ಸಾಮಾನ್ಯ ಜ್ಞಾನ, ಭಾವನಾತ್ಮಕ ಸಮತೋಲನ ಮತ್ತು ಆಟದ ಅರಿವಿನ ಅಂತರವು ನಿಕಟ ಭವಿಷ್ಯದಲ್ಲಿ ಕಡಿಮೆಯಾಗಬಹುದು.

ಏಕೆಂದರೆ ಪಾಕಿಸ್ತಾನದಿಂದ ಒಂದು ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ವಿಶ್ವದರ್ಜೆಯ ಬ್ಯಾಟರ್ಗಳು ಈಗ ಇಲ್ಲ. ಜಗತ್ತಿನ ಬೇರೆಲ್ಲ ತಂಡಗಳೂ ಬಿರುಗಾಳಿ ಎಬ್ಬಿಸುತ್ತಿರುವ ಹೊತ್ತಿನಲ್ಲಿ ಅವರು ತಮ್ಮ ತಲೆಗಳನ್ನು ಮರಳಲ್ಲಿ ಮುಚ್ಚಿಟ್ಟುಕೊಳ್ಳುತ್ತಿರುವ ಪ್ರಯತ್ನದಲ್ಲಿದ್ದಾರೆ!

ಆದರೆ ಭಾರತವು ನಿಧಾನವಾಗಿಯಾದರೂ ಬದಲಾಗಿದೆ. ಆಧುನಿಕ ಆಟಕ್ಕೆ ತಕ್ಕಂತೆ ಹೊಂದಿಕೊಂಡಿರುವ ರೀತಿ ಅದ್ಭುತ. ಐಪಿಎಲ್ ಟೂರ್ನಿಯು ಜಾಗತಿಕ ಮಟ್ಟದಲ್ಲಿ ಅದ್ಭುತ ವ್ಯವಸ್ಥೆಯಾಗಿ ರೂಪುಗೊಂಡಿದೆ. ಭಾರತೀಯ ಕ್ರಿಕೆಟ್ ವ್ಯವಸ್ಥೆಯು ಸುದೃಢ, ರೋಮಾಂಚಕ, ರಚನಾತ್ಮಕವಾಗಿ ರೂಪುಗೊಂಡಿರುವುದರಲ್ಲಿ ಸಂದೇಹವಿಲ್ಲ.

ಇದೀಗ ಆ ಸತ್ಯಕ್ಕೆ ಕನ್ನಡಿ ಹಿಡಿದಿರುವ ಸೂರ್ಯಕುಮಾರ್ ಅವರ ಬೆನ್ನು ತಟ್ಟಬೇಕು. ಒಂದು ಕಾಲದಲ್ಲಿ ಉಭಯ ದೇಶಗಳ ಮಧ್ಯೆ ಇದ್ದ ಕ್ರಿಕೆಟ್ ವೈರತ್ವ ಈಗ ಇಲ್ಲ. ಬಹುಶಃ ಭವಿಷ್ಯದಲ್ಲಿಯೂ ಇರುವುದಿಲ್ಲ.

ಇಂದಿನ ಪಂದ್ಯ

ಪಾಕಿಸ್ತಾನ–ಶ್ರೀಲಂಕಾ (ಅಬುಧಾಬಿ)

ಪಂದ್ಯ ಆರಂಭ: ರಾತ್ರಿ 8

ನೇರಪ್ರಸಾರ: ಸೋನಿ ಸ್ಪೋರ್ಟ್ಸ್

ಸೂಪರ್ ಫೋರ್ ಪಂದ್ಯದಲ್ಲಿ ಭಾರತಕ್ಕೆ ಮಣಿದ ಪಾಕ್ | ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಅಬ್ಬರದ ಜೊತೆಯಾಟ | ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ಎದುರಿನ ಎರಡೂ ಪಂದ್ಯಗಳಲ್ಲಿ ಗೆದ್ದ ಸೂರ್ಯ ಬಳಗ

‘ಗನ್ಶಾಟ್ ಸಂಭ್ರಮ: ಜನ ಏನಂದುಕೊಂಡರೂ ಚಿಂತೆಯಿಲ್ಲ’

ದುಬೈ: ಪಾಕಿಸ್ತಾನ ತಂಡದ ಬ್ಯಾಟರ್ ಸಾಹೀಬ್ಝಾದಾ ಫರ್ಹಾನ್ ಅವರು ಭಾನುವಾರ ಭಾರತ ತಂಡದ ಎದುರಿನ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು. ಈ ಸಂದರ್ಭದಲ್ಲಿ ಅವರು ತಮ್ಮ ಬ್ಯಾಟ್ ಅನ್ನು ಬಂದೂಕಿನಂತೆ ಹಿಡಿದು ಟ್ರಿಗರ್ ಒತ್ತುವ ಅಣಕು (ಗನ್ಶಾಟ್) ಮಾಡಿ ಸಂಭ್ರಮಿಸಿದರು. ಅವರ ಈ ನಡೆಯು ಈಗ ಸಾರ್ವಜನಿಕ ವಲಯದಲ್ಲಿ ಟೀಕೆಗಳಿಗೆ ಕಾರಣವಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಫರ್ಹಾನ್ ಅವರು ‘ಸ್ಕೋರ್ಬೋರ್ಡ್ನಲ್ಲಿ ನನ್ನ ಅರ್ಧಶತಕದ ಸಾಧನೆ ಮೂಡಿದಾಗ ಮನಸ್ಸಲ್ಲಿ ಸಂಭ್ರಮಿಸಬೇಕು ಅನಿಸಿತ್ತು. ಮಾಡಿದೆ. ಇದಕ್ಕೆ ಜನ ಹೇಗೆ ಪ್ರತಿಕ್ರಿಯಿಸಬಹುದು ಎಂದು ನಾನು ಯೋಚಿಸಿಯೂ ಇಲ್ಲ. ಜನ ಹೇಗೆ ಸ್ವೀಕರಿದ್ದಾರೆಂದು ತಲೆಯನ್ನೂ ಕೆಡಿಸಿಕೊಳ್ಳುವುದೂ ಇಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.