ಕಾರಿನ ಮೇಲೆ ಬಿದ್ದ ಮೆಟ್ರೊ ಬ್ಯಾರಿಕೇಡ್: ಪ್ರಯಾಣಿಕರು ಪಾರು

ಬೆಂಗಳೂರು: ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ಮೆಟ್ರೊ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ನಿಲ್ಲಿಸಿದ್ದ ಬ್ಯಾರಿಕೇಡ್‌ನಿಂದ ಅಪಘಾತ ಸಂಭವಿಸಿದ್ದು, ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
‘ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ಅಪಘಾತ ಸಂಭವಿಸಿರುವುದಾಗಿ ಗೊತ್ತಾಗಿದೆ. ಅಪಘಾತದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಯಾರೊಬ್ಬರೂ ದೂರು ನೀಡಿಲ್ಲ’ ಎಂದು ಎಚ್‌ಎಎಲ್ ಸಂಚಾರ ಠಾಣೆ ಪೊಲೀಸರು ಹೇಳಿದರು.
ರಸ್ತೆಗೆ ವಾಲಿದ್ದ ಬ್ಯಾರಿಕೇಡ್: ‘ದೊಡ್ಡನೆ ಕ್ಕುಂದಿ ಜಂಕ್ಷನ್‌ನಿಂದ ಮಹದೇವಪುರ ಮುಖ್ಯರಸ್ತೆ ಮಧ್ಯದಲ್ಲಿ ಮೆಟ್ರೊ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಕಾಮಗಾರಿ ನಡೆಯುವ ಸ್ಥಳದ ಎರಡು ಬದಿಯಲ್ಲಿ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಸಾಲಾಗಿ ನಿಲ್ಲಿಸಲಾಗಿದೆ’ ಎಂದು ಸ್ಥಳೀಯರೊಬ್ಬರು ಹೇಳಿದರು.
‘ಬ್ಯಾರಿಕೇಡ್‌ವೊಂದರ ಶೇ 10ರಷ್ಟು ಭಾಗ ರಸ್ತೆಗೆ ವಾಲಿತ್ತು. ಇದೇ ಮಾರ್ಗದಲ್ಲಿ ವೇಗವಾಗಿ ಹೊರಟಿದ್ದ ಕಾರು, ಬ್ಯಾರಿಕೇಡ್‌ನ ವಾಲಿದ್ದ ಭಾಗಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಬ್ಯಾರಿಕೇಡ್ ಸಂಪೂರ್ಣವಾಗಿ ಕಿತ್ತು ಬಂದು ಕಾರಿಗೆ ಅಪ್ಪಳಿಸಿತ್ತು. ಕಾರು ಭಾಗಶಃ ಜಖಂಗೊಂಡಿತು’ ಎಂದು ತಿಳಿಸಿದರು.
‘ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಅವರಿಗೆ ಯಾವುದೇ ಗಾಯಗಳಾಗಿಲ್ಲ. ಕಾರಿನಿಂದ ಇಳಿದ ಅವರು, ಸ್ಥಳದಲ್ಲಿದ್ದ ಮೆಟ್ರೊ ಕಾಮಗಾರಿ ಕಾರ್ಮಿಕರನ್ನು ಪ್ರಶ್ನಿಸಿ
ದ್ದರು. ಮೆಟ್ರೊ ಎಂಜಿನಿಯರ್ ಸಹ ಸ್ಥಳಕ್ಕೆ ಬಂದು ಪರಿಶೀಲಿಸಿದರು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.