ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಒಂದೇ ದಿನ 8.26 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ

Published 7 ಆಗಸ್ಟ್ 2024, 7:43 IST
Last Updated 7 ಆಗಸ್ಟ್ 2024, 7:43 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಆಗಸ್ಟ್ 6ರಂದು ದಾಖಲೆ ಪ್ರಮಾಣದಲ್ಲಿ (8.26 ಲಕ್ಷ) ಜನರು ಸಂಚರಿಸಿದ್ದಾರೆ.

ಪಕ್ಷಗಳ ರ‍್ಯಾಲಿ, ಸ್ವಾತಂತ್ರ್ಯ ದಿನಾಚರಣೆ, ಫಲಪುಷ್ಪ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿಂದಾಗಿ 2022ರ ಆಗಸ್ಟ್‌ 15ರಂದು 8.25 ಲಕ್ಷ ಜನರು ಮೆಟ್ರೊದಲ್ಲಿ ಪ್ರಯಾಣಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಆನಂತರ ನಿತ್ಯದ ಪ್ರಯಾಣ 8 ಲಕ್ಷದ ಒಳಗೆ ಇತ್ತು. ಈ ವರ್ಷ ಜೂನ್ 8ರಂದು 8.08 ಲಕ್ಷ ಜನರು ಪ್ರಯಾಣಿಸಿದ್ದರು. ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದ್ದು, ದೊಡ್ಡಮಟ್ಟದ ಕಾರ್ಯಕ್ರಮಗಳು ಇಲ್ಲದೇ ಇದ್ದರೂ ಆ.6ರಂದು 8,26,883 ಜನರು ಪ್ರಯಾಣಿಸಿದ್ದಾರೆ.

‘ನಮ್ಮ ಮೆಟ್ರೊದಿಂದಾಗಿ ಜನರು ವಾಹನ ಸಂದಣಿಯಲ್ಲಿ ಸಿಲುಕಿಕೊಳ್ಳುವುದು ತಪ್ಪಿದೆ. ಸಮಯದ ಉಳಿತಾಯವಾಗಿದೆ. ಹಾಗಾಗಿ ದಿನದಿಂದ ದಿನಕ್ಕೆ ಮೆಟ್ರೊ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಹಸಿರು ಮತ್ತು ನೀಲಿ ಮಾರ್ಗದಲ್ಲಿ 57 ಮೆಟ್ರೊ ರೈಲುಗಳು ಸಂಚರಿಸುತ್ತಿದ್ದು, ಇಲ್ಲಿವರೆಗಿನ ಪ್ರಯಾಣಿಕರ ಸರಾಸರಿಗೆ ಅನುಗುಣವಾಗಿದೆ. ಜನದಟ್ಟಣೆಯ ಅವಧಿಯಲ್ಲಿ 3 ನಿಮಿಷಕ್ಕೊಂದು ರೈಲು ಸಂಚರಿಸುತ್ತಿದೆ. ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಲಿದ್ದು, ಈಗಿರುವ ಎರಡು ಮಾರ್ಗಗಳಿಗೆ ಇನ್ನು 10 ಕೋಚ್‌ಗಳು (ರೈಲು) ಅವಶ್ಯಕತೆ ಬೀಳಲಿದೆ. ಆರು ತಿಂಗಳಲ್ಲಿ ಕೋಚ್‌ಗಳು ಬರಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT