‘ಯೂನೀಸ್ ಝರೂರಾ ವಿವಿಧ ದೇಶಗಳಿಗೆ ತೆರಳಿ ಅಚ್ಚರಿಯ ಉಡುಗೊರೆ ನೀಡುತ್ತಾರೆ. ಅವರು ಕೆಲವು ಪ್ರಶ್ನೆ ಕೇಳಿ ಸರಿಯಾದ ಉತ್ತರ ನೀಡಿದವರಿಗೆ ದುಬಾರಿ ಬೆಲೆಯ ಐ–ಫೋನ್ ಕೊಡುತ್ತಾರೆ ಎಂದು ಹೇಳಲಾಗಿದೆ. ಅವರು ಗುರುವಾರ ಮಹಾತ್ಮ ಗಾಂಧಿ ರಸ್ತೆಗೆ ಬಂದಿದ್ದರು. ಅದೇ ವೇಳೆ ಅವರ ಅಭಿಮಾನಿಗಳೂ ಜಮಾವಣೆಗೊಂಡಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದರು. ಅನುಮತಿ ಪಡೆಯದೆ ಜನರ ಗುಂಪು ಸೇರಿಸಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು, ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.