ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿ ಕೊಳವೆ ಜೋಡಿಸಲು ಅಗೆದ ರಸ್ತೆಯನ್ನು ಹಾಗೇ ಬಿಟ್ಟಿರುವುದು
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಅಂದ್ರಹಳ್ಳಿ ಮುಖ್ಯ ರಸ್ತೆ ಹಾಳಾಗಿರುವ ದೃಶ್ಯ
ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್
ಅಂದ್ರಹಳ್ಳಿಯ ಡಿ ಗ್ರೂಪ್ ಲೇಔಟ್‌ನಿಂದ ಕರಿಓಬನಹಳ್ಳಿವರೆಗಿನ ರಸ್ತೆಯಲ್ಲಿ ಜಲಮಂಡಳಿಯವರು ನೀರು ಸೋರಿಕೆಯಾಗುತ್ತಿದ್ದ ಜಾಗಗಳಲ್ಲಿ ಎರಡು ಮೂರು ಬಾರಿ ದುರಸ್ತಿ ಕಾಮಗಾರಿ ನಡೆಸಿದರು. ಕೊಳವೆಗಳನ್ನು ದುರಸ್ತಿ ಮಾಡಿದ ಜಾಗದಲ್ಲಿ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ. ಗುಣಮಟ್ಟದ ಕಾಮಗಾರಿ ಕೈಗೊಳ್ಳದ ಕಾರಣ ರಸ್ತೆಗಳು ಗುಂಡಿಗಳಾಗಿವೆ. ಸಾರ್ವನಿಕರು ಸುಗಮವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಗುತ್ತಿಗೆದಾರರು ಮಾಡಿದ ಕಾಮಗಾರಿಯನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿಲ್ಲ. ತಕ್ಷಣ ರಸ್ತೆ ದುರಸ್ತಿಯಾಗಬೇಕು. ಕಳಪೆ ಕಾಮಗಾರಿ ಕೈಗೊಂಡವರಿಗೆ ದಂಡ ವಿಧಿಸಬೇಕು