ಚೀನಾ ಅಮೆರಿಕಕ್ಕೆ ಹೋಲಿಸಿದರೆ ಭಾರತ ಎಐ ಹಾಗೂ ಡೀಫ್‌ಟೆಕ್ ತಂತ್ರಜ್ಞಾನ ವಲಯದಲ್ಲಿ ಹಿಂದೆ ಇದೆ. ಇದಕ್ಕಾಗಿಯೇ ಡೇಟಾ ಕೇಂದ್ರವನ್ನು ಆರಂಭಿಸಿ ಒಂದೆಡೆ ಮಾಹಿತಿ ಕಲೆ ಹಾಕಲು ಒತ್ತು ನೀಡುತ್ತಿದ್ದೇವೆ.
ಅಭಿಷೇಕ್ ಸಿಂಗ್ ಹೆಚ್ಚುವರಿ ಕಾರ್ಯದರ್ಶಿ ಭಾರತ ಸರ್ಕಾರ
ಚಂದ್ರಯಾನ 4 ಮತ್ತು 5ರ ಯೋಜನೆಯನ್ನು ಮುಂದಿನ ಮೂರು ದಶಕದಲ್ಲಿ ಜಾರಿಗೊಳಿಸಲು ಇಸ್ರೊ ಅಣಿಯಾಗುತ್ತಿದೆ. ಬಾಹ್ಯಾಕಾಶ ವಲಯದಲ್ಲಿ ವಿಶ್ವದಲ್ಲೇ ಮುಂಚೂಣಿಯ ಮೂರನೇ ದೇಶವಾಗುವತ್ತ ತಾಂತ್ರಿಕವಾಗಿ ಬೆಳೆಯುತ್ತಿದೆ
ವಿ.ನಾರಾಯಣನ್ ಇಸ್ರೊ ಅಧ್ಯಕ್ಷ ಬೆಂಗಳೂರು
8 ವರ್ಷ ಬಾಲಕನ ನವೋದ್ಯಮ
ತಂತ್ರಜ್ಞಾನ ಶೃಂಗಸಭೆಯ ಎರಡನೇ ದಿನ ನವೋದ್ಯಮಗಳ 50 ಹೊಸ ಆವಿಷ್ಕಾರ ಮತ್ತು ಪರಿಹಾರಗಳನ್ನು ಬಿಡುಗಡೆ ಮಾಡಲಾಯಿತು. ಅವುಗಳಲ್ಲಿ ಕೇವಲ 8 ವರ್ಷದ ಕಿರಿಯ ಅತ್ವಿಕ್ ಅಮಿತ್ ಕುಮಾರ್ ಬಿಡುಗಡೆ ಮಾಡಿದ ಝೋ ಝೋ ಕನೆಕ್ಟ್ ಡಿಜಿಟಲ್ ಬಿಸಿನೆಸ್ ಕಾರ್ಡ್ ಒಂದು. ಈ ಸ್ಮಾರ್ಟ್ ತಂತ್ರಜ್ಞಾನವು ನೆಟ್‌ವರ್ಕಿಂಗ್ ಅನ್ನು ಇನ್ನಷ್ಟು ಸುಲಭವಾಗಿಸಿ ಬ್ರ್ಯಾಂಡಿಂಗ್ ಅನ್ನು ಸರಳಗೊಳಿಸಲಿದೆ.