ಬೆಂಗಳೂರು: ನಗರದ ವಿವಿಧ ಬಡಾವಣೆ ಹಾಗೂ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ 103 ಬಸ್ ತಂಗುದಾಣಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಕೋರಿ ನಗರ ಪೊಲೀಸರು, ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಸಿಲ್ಕ್ ಬೋರ್ಡ್ ಜಂಕ್ಷನ್, ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ 103 ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಿ, ಸಂಚಾರ ದಟ್ಟಣೆಯ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಲು ನಗರ ಸಂಚಾರ ಪೊಲೀಸರು ಮುಂದಾಗಿದ್ದಾರೆ.

ಟ್ರಾಫಿಕ್ ಸಿಗ್ನಲ್ ಬಳಿ ಬಸ್ ನಿಲ್ದಾಣಗಳಿರುವುದು ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದೆ. ಅವೈಜ್ಞಾನಿಕ, ಅಸಮರ್ಪಕ ಬಸ್ ನಿಲ್ದಾಣಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು. ನಗರ ಸಂಚಾರ ಪೊಲೀಸರು ಹಾಗೂ ಬಿಎಂಟಿಸಿ ಅಧಿಕಾರಿಗಳು ಜಂಟಿ ಅಧ್ಯಯನ ನಡೆಸಿ 103 ನಿಲ್ದಾಣಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಈ ನಿಲ್ದಾಣಗಳನ್ನು ಸ್ಥಳಾಂತರಿಸಿದರೆ ದಟ್ಟಣೆ ತುಸು ತಗ್ಗಬಹುದು ಎಂದು ಅಂದಾಜಿಸಲಾಗಿದೆ.

ಗುರುತಿಸಿರುವ 103 ನಿಲ್ದಾಣಗಳು ಟ್ರಾಫಿಕ್ ಸಿಗ್ನಲ್ಗೆ ತೀರಾ ಸಮೀಪದಲ್ಲಿವೆ. ಪ್ರಯಾಣಿಕರ ದೃಷ್ಟಿಯಿಂದ ಈ ನಿಲ್ದಾಣಗಳಲ್ಲಿ ಬಸ್ಗಳನ್ನು ನಿಲ್ಲಿಸಲೇಬೇಕಾಗಿದೆ. ಒಂದು ಬಸ್ ನಿಂತಾಗ ಅದರ ಹಿಂದೆ ಹತ್ತಾರು ವಾಹನಗಳು ಸರದಿಯಲ್ಲಿ ನಿಲ್ಲುತ್ತಿವೆ. ಇದು ದಟ್ಟಣೆಗೆ ಕಾರಣವಾಗುತ್ತಿದೆ. ಈಗಿರುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಸೂಕ್ತ ಸ್ಥಳದಲ್ಲಿ ಬಸ್ ತಂಗುದಾಣ ನಿರ್ಮಿಸಬೇಕು ಎಂದು ಅಧ್ಯಯನ ತಂಡವು ಶಿಫಾರಸು ಮಾಡಿದೆ.

ಸ್ಥಳಾಂತರಕ್ಕೆ ಗುರುತಿಸಿದ ಬಸ್ ನಿಲ್ದಾಣಗಳು: ಯಲಹಂಕದ ಮೂರು, ಕೆ.ಆರ್. ಪುರದ ಐದು, ಮಹದೇವಪುರದ ಏಳು, ಹೆಣ್ಣೂರಿನ ಎರಡು, ಪೀಣ್ಯದ ನಾಲ್ಕು, ಜಾಲಹಳ್ಳಿಯ ಮೂರು, ಚಿಕ್ಕಬಾಣಾವರದ 12, ಜಯನಗರದ ಮೂರು, ಬನಶಂಕರಿಯ ಒಂದು, ಬೆಳ್ಳಂದೂರಿನ ಮೂರು, ವೈಟ್ಫೀಲ್ಡ್ನ ಒಂದು, ಜೆ.ಪಿ.ನಗರದ ನಾಲ್ಕು, ಕಬ್ಬನ್ಪಾರ್ಕ್ನ ಮೂರು, ಕಾಮಾಕ್ಷಿಪಾಳ್ಯದ ಏಳು, ಜ್ಞಾನಭಾರತಿಯ 12 ಬಸ್ ತಂಗುದಾಣಗಳನ್ನು ಸ್ಥಳಾಂತರಕ್ಕೆ ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.