ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್ ರಹಿತ ಸವಾರಿಯೇ ಹೆಚ್ಚು

ನೋ ಪಾರ್ಕಿಂಗ್‌ನಲ್ಲಿ ನಿಲುಗಡೆಗೆ ನಂತರದ ಸ್ಥಾನ * ‘ಪಬ್ಲಿಕ್ ಐ’ ಆ್ಯಪ್‌ನಲ್ಲಿ ಮಾಹಿತಿ ದಾಖಲು
Last Updated 20 ಫೆಬ್ರುವರಿ 2020, 22:44 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯಲ್ಲಿ ಹೆಲ್ಮೆಟ್ ಧರಿಸದೆಯೇ ದ್ವಿಚಕ್ರವಾಹನ ಸವಾರಿ, ಪಾದಚಾರಿ ಮಾರ್ಗ ಮತ್ತು ವಾಹನ ನಿಲುಗಡೆ ನಿಷೇಧಿತ ಜಾಗದಲ್ಲಿ ವಾಹನ ನಿಲುಗಡೆ ಪ್ರಕರಣಗಳೇ ಹೆಚ್ಚು.

‌ಇದನ್ನು ಸಾರ್ವಜನಿಕರೇ ಪತ್ತೆ ಹೆಚ್ಚಿ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂಚಾರ ಪೊಲೀಸರು ಮತ್ತು ‘ಜನಾಗ್ರಹ ಸೆಂಟರ್ ಫಾರ್ ಸಿಟಿಜನ್‌ಶಿಪ್ ಡೆಮಾಕ್ರಸಿ’ ಸಂಸ್ಥೆ 2015ರಲ್ಲಿ ಅಭಿವೃಧ್ಧಿಪಡಿಸಿರುವ ‘ಪಬ್ಲಿಕ್ ಐ’ ಆ್ಯಪ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಸಾರ್ವಜನಿಕರು ದಾಖಲಿಸುತ್ತಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ 1.26 ಲಕ್ಷ ಮಂದಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. 3.28 ಲಕ್ಷ ದೂರುಗಳನ್ನು ದಾಖಲಿಸಿದ್ದಾರೆ. ಈ ಪೈಕಿ 2.27 ಲಕ್ಷ ದೂರು ಬಗೆಹರಿಸಿದ್ದಾರೆ.

ಈ ಆ್ಯಪ್ ಬಳಕೆ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2018ರಲ್ಲಿ 60,783 ದೂರುಗಳು ದಾಖಲಾಗಿದ್ದು, ಅವುಗಳಲ್ಲಿ ಶೇ 63ರಷ್ಟನ್ನು ಬಗೆಹರಿಸಲಾಗಿದೆ. 2019ಲ್ಲಿ ದೂರುಗಳ ಪ್ರಮಾಣಶೇ 150ರಷ್ಟು ಹೆಚ್ಚಳವಾಗಿದ್ದು, ಶೇ 72ರಷ್ಟು ದೂರುಗಳನ್ನು ಪರಿಹರಿಸಲಾಗಿದೆ.

ಇವುಗಳನ್ನು ವಿಶ್ಲೇಷಿಸಿದಾಗ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಸವಾರಿ, ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ, ಹಾಗೂ ನೋಪಾರ್ಕಿಂಗ್‌ ಜಾಗದಲ್ಲಿ ವಾಹನ ನಿಲ್ಲಿಸಿದ ಪ್ರಕರಣಗಳೇ ಹೆಚ್ಚು ಎಂಬುದನ್ನು ಅಂಕಿ ಅಂಶಗಳು ಹೇಳಿವೆ.

ಶಾ‌ಂತಲನಗರ, ಬೆಳ್ಳಂದೂರು, ಕೋರಮಂಗಲ, ದೊಡ್ಡನೆಕ್ಕುಂದಿ, ಸಂಪಂಗಿರಾಮನಗರ, ಹೊಸಕೆರೆಹಳ್ಳಿ, ಗಿರಿನಗರ, ರಾಜರಾಜೇಶ್ವರಿ ನಗರ, ಪಟ್ಟಾಭಿರಾಮನಗರ, ಸಾರಕ್ಕಿಯ ಜನ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ.

ದೈನಂದಿನ ಸರಾಸರಿ ದೂರು ದಾಖಲು ಸಂಖ್ಯೆಯೂ ಏರಿಕೆಯಾಗಿದೆ. 2018ರಲ್ಲಿ ದಿನಕ್ಕೆ ಸರಾಸರಿ 166 ದೂರುಗಳನ್ನು ಆ್ಯಪ್‌ನಲ್ಲಿ ದಾಖಲು ಮಾಡಿದ್ದರೆ, 2019ರಲ್ಲಿ ದಿನಕ್ಕೆ ಸರಾಸರಿ 417 ದೂರುಗಳು ದಾಖಲಾಗಿವೆ.

ಯಾರ ವಿರುದ್ಧ ದೂರು ದಾಖಲಿಸಬಹುದು?

*ಹೆಲ್ಮೆಟ್ ಧರಿಸದೆ ಬೈಕ್ ಸವಾರಿ
*ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ
*ಹಿಂಬದಿ ಸವಾರ ಹೆಲ್ಮೆಟ್ ಧರಿಸದೇ ಇರುವುದು
*ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ
*ದೋಷಯುಕ್ತ, ಅಲಂಕಾರಿಕ ಸಂಖ್ಯಾ ಫಲಕ
*ಏಕಮುಖ ಸಂಚಾರ ನಿಯಮ ಉಲ್ಲಂಘನೆ
*ಅಡ್ಡಾದಿಡ್ಡಿ ವಾಹನ ನಿಲುಗಡೆ
*ಜೀಬ್ರಾ ಕ್ರಾಸಿಂಗ್‌ನಲ್ಲಿ ವಾಹನ ನಿಲುಗಡೆ
*ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ
*ದ್ವಿಚಕ್ರವಾಹನದಲ್ಲಿ ಮೂರು ಜನ ಸವಾರಿ
*ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ ವ್ಹಿಲಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT