ಬೆಂಗಳೂರು: ನಗರದ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟವಾಗುತ್ತಿದೆ. ಸಂಚಾರ ದಟ್ಟಣೆಯೂ ಅತಿಯಾಗಿದೆ. ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಿ. ಬೆಂಗಳೂರಿನ ಪ್ರಮುಖ ಭಾಗಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿ ಎಂದು ಉದ್ಯಮಿಗಳು ಸರ್ಕಾರಕ್ಕೆ ಸಲಹೆ ನೀಡಿದರು.

ನವೆಂಬರ್ನಲ್ಲಿ ನಡೆಯುವ ಬೆಂಗಳೂರು ಟೆಕ್ ಶೃಂಗ ಸಭೆ ಭಾಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಉಪಾಹಾರ ಸಭೆಯಲ್ಲಿ ಮಾತನಾಡಿದ ಉದ್ಯಮಿಗಳು, ಬೆಂಗಳೂರಿನಲ್ಲಿ ಐ.ಟಿ ಮಾನವ ಸಂಪನ್ಮೂಲ ತರಬೇತಿಗೆ ಹೆಚ್ಚಿನ ಒತ್ತು ನೀಡಬೇಕು. ನವೋದ್ಯಮ, ಡೀಪ್ ಟೆಕ್ ವಲಯಕ್ಕೆ ಆದ್ಯತೆ ಕೊಡಬೇಕು. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೂ ಇನ್ನಷ್ಟು ಒತ್ತು ಸಿಗಬೇಕು ಎಂದರು.

ಐ.ಟಿ, ಎಲೆಕ್ಟ್ರಾನಿಕ್ಸ್ ವಿಷನ್ ಗ್ರೂಪ್ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಸ್ಟಾರ್ಟಪ್ಸ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಸ್ಪೇಸ್ ವಿಷನ್ ಗ್ರೂಪ್ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ , ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ.ನಾಯ್ದು ಸಹಿತ ವಿಷನ್ ಗ್ರೂಪ್ಗಳ ಮುಖ್ಯಸ್ಥರು ವಿವಿಧ ವಲಯಗಳ ಅವಕಾಶಗಳು ಮತ್ತು ಕಾರ್ಯತಂತ್ರದ ಬಗ್ಗೆ ವಿವರ ನೀಡಿದರು.

ಕೆಲವು ವರ್ಷದಿಂದ ಉದ್ಯಮ ವಲಯ ಬೆಂಗಳೂರಿನಲ್ಲಿ ಮೂಲಸೌಕರ್ಯ ಒದಗಿಸುವ ಬೇಡಿಕೆ ಇಡುತ್ತಿದೆ. ಸರ್ಕಾರವೂ ಇದಕ್ಕಾಗಿ ಯೋಜನೆಗಳನ್ನು ರೂಪಿಸಿದೆ. ಹೊಸ ಫ್ಲೈ ಓವರ್ಗಳು, ಸುರಂಗ ಮಾರ್ಗ ಸೇರಿದಂತೆ ಕೆಲವು ಯೋಜನೆಗಳಿಗಾಗಿ ₹75 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, 1997ರಲ್ಲಿ ಭಾರತದ ಮೊದಲ ಐಟಿ ನೀತಿಯನ್ನು ಜಾರಿಗೆ ತರುವುದರಿಂದ ಹಿಡಿದು 2024ರಲ್ಲಿ ಕ್ವಾಂಟಮ್ ತಂತ್ರಜ್ಞಾನ ರೋಡ್ಮ್ಯಾಪ್ ಅನ್ನು ಪರಿಚಯಿಸುವ ಮೂಲಕ ಈ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಭಾರತದ ಸಾಫ್ಟ್ವೇರ್ ರಫ್ತಿನ ಶೇ 44ರಷ್ಟು ಕರ್ನಾಟಕದ ಪಾಲಿದ್ದು, 18,300ಕ್ಕೂ ಹೆಚ್ಚು ಸ್ಟಾರ್ಟಪ್ಗಳು, 875ರಷ್ಟು ಜಾಗತಿಕ ಸಾಮರ್ಥ್ಯ ಕೇಂದ್ರಗಳು ಮತ್ತು ದೇಶದ ಸುಮಾರು ಅರ್ಧದಷ್ಟು ಎಐ ಪ್ರತಿಭೆಗಳೊಂದಿಗೆ ಮುಂದಡಿ ಇಟ್ಟಿದೆ. ನಾವೀನ್ಯತೆ, ಪ್ರತಿಭೆ ಮತ್ತು ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಜಾಗತಿಕ ನಾಯಕನನ್ನಾಗಿ ರೂಪಿಸುವುದು ನಮ್ಮ ಧ್ಯೇಯವಾಗಿದೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ನಮ್ಮ ಮೆಟ್ರೊ ಮತ್ತು ಉಪನಗರ ರೈಲು ವಿಸ್ತರಣೆಯಿಂದ ಹಿಡಿದು ಎಲಿವೇಟೆಡ್ ಕಾರಿಡಾರ್ಗಳು ಮತ್ತು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸುವುದತ್ತ ನಮ್ಮ ಚಿತ್ತ ಹರಿದಿದೆ. ಬೆಂಗಳೂರನ್ನು ವಿಶ್ವ ಮಟ್ಟದ ವಾಸಯೋಗ್ಯ ನಗರವನ್ನಾಗಿ ಮಾಡುವ ಗುರಿಯೊಂದಿಗೆ ಕಾರ್ಯೋನ್ಮುಖವಾಗಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.