ಬೆಂಗಳೂರಿನಲ್ಲಿ ಕ್ಷಿಪ್ರ ಪ್ರವಾಹ ಹಾಗೂ ನೀರು ನಿಲ್ಲುವ ಸಂಕಷ್ಟವಿದೆ. ಸುರಂಗ ರಸ್ತೆಯಲ್ಲಿ ಈ ಸಮಸ್ಯೆಗಳನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳೇನು? ವಿನ್ಯಾಸದಲ್ಲಿ ಇದನ್ನು ಏಕೆ ಅಳವಡಿಸಿಲ್ಲ? ತೆರದ ಬಾವಿ ಹಾಗೂ ಕೊಳವೆಬಾವಿಗಳನ್ನು ಮುಚ್ಚುವ ಬಗ್ಗೆ ಮಾಹಿತಿ ಇಲ್ಲ. ರ‍್ಯಾಂಪ್ ಹಾಗೂ ಸುರಂಗ ರಸ್ತೆಯಲ್ಲಿ ಅಗ್ನಿಶಾಮಕ ವ್ಯವಸ್ಥೆಗೆ ಸಂಬಂಧಿಸಿದ ವಿಷಯದ ಬಗ್ಗೆ ಸ್ಪಷ್ಟ ವಿವರಣೆ ಇಲ್ಲ.