ಬೆಂಗಳೂರು: ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿ ರೈಲಿನೊಳಗೆ ಊಟ ಮಾಡಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ದಂಡ ವಿಧಿಸಿರುವುದಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ನ (ಬಿಎಂಆರ್ಸಿಎಲ್) ತಿಳಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್/ಟ್ವಿಟರ್ನಲ್ಲಿ ಪ್ರಕಟಿಸಿರುವ 'ನಮ್ಮ ಮೆಟ್ರೋ', 'ಮಾದವರ ನಿಲ್ದಾಣದಿಂದ ಮಾಗಡಿ ರಸ್ತೆ ನಿಲ್ದಾಣಕ್ಕೆ ಪ್ರಯಾಣಿಸುವ ವೇಳೆ ಮೆಟ್ರೋ ನಿಯಮ ಉಲ್ಲಂಘಿಸಿದ ಮಹಿಳೆಗೆ ₹ 500 ದಂಡ ವಿಧಿಸಲಾಗಿದೆ. ಮಹಿಳೆಯು, ಏಪ್ರಿಲ್ 26ರಂದು ಮೆಟ್ರೋದಲ್ಲಿ ಪ್ರಯಾಣಿಸುವಾಗಲೇ ಊಟ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದರು. ಇದನ್ನು ವಿಡಿಯೊ ಮಾಡಿದ್ದ ಸಹ ಪ್ರಯಾಣಿಕರೊಬ್ಬರು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು' ಎಂದು ಹೇಳಿದೆ.

ಮುಂದುವರಿದು, 'ಆ ಮಹಿಳೆಯು ಇಂದು ಮಾದವರ ನಿಲ್ದಾಣ ಪ್ರವೇಶಿಸಿದ ಸಂದರ್ಭ, ಭದ್ರತಾ ಸಿಬ್ಬಂದಿ ದಂಡ ಹಾಕಿದ್ದಾರೆ' ಎಂದು ಮಾಹಿತಿ ನೀಡಿದೆ.

ಮೆಟ್ರೋ ಆವರಣದಲ್ಲಿ ಆಹಾರ, ಪಾನೀಯ ಸೇವಿಸುವುದನ್ನು ನಿಷೇಧಿಸಲಾಗಿದೆ. ನೈರ್ಮಲ್ಯ ಕಾಪಾಡುವುದು ಹಾಗೂ ಪ್ರತಿ ಪ್ರಯಾಣಿಕರಿಗೂ ಆನಂದದಾಯಕ ವಾತಾವರಣ ಕಲ್ಪಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪ್ರಯಾಣಿಕರೂ ನಿಯಮಗಳನ್ನು ಪಾಲಿಸಬೇಕು ಎಂದು ಒತ್ತಾಯಿಸಿದೆ.
.ಸೇನೆಗೆ ದೇಣಿಗೆ ಕುರಿತಾದ ದಾರಿ ತಪ್ಪಿಸುವ ವಾಟ್ಸ್ಆ್ಯಪ್ ಸಂದೇಶ:ಕೇಂದ್ರ ಎಚ್ಚರಿಕೆ.Tobacco Fine | ತಂಬಾಕು ಜಗಿದರೆ ದಂಡ: ಬಿಎಂಆರ್ಸಿಎಲ್ ನಿರ್ಧಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.