ಮಂಗಳವಾರ, ಅಕ್ಟೋಬರ್ 27, 2020
20 °C
ಎರಡು ತಿಂಗಳಲ್ಲಿ 4,500 ಯುನಿಟ್‌ ಬಳಕೆ * ಸೌಲಭ್ಯ ಬಳಸಿಕೊಂಡ 600 ಗ್ರಾಹಕರು

ಇವಿ ಜಾರ್ಚಿಂಗ್‌: 72 ಘಟಕ ಕಾರ್ಯಾಚರಣೆ

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗರದಲ್ಲಿ ಬೆಸ್ಕಾಂ ಜಾರ್ಜಿಂಗ್‌ ಘಟಕಗಳನ್ನು ಅಳವಡಿಸಿದ್ದು, ಗ್ರಾಹಕರು ಉತ್ಸಾಹದಿಂದ ಇವುಗಳನ್ನು ಬಳಸುತ್ತಿದ್ದಾರೆ. ಎರಡು ತಿಂಗಳಲ್ಲಿ 4,500 ಯುನಿಟ್‌ ವಿದ್ಯುತ್‌ ಖರ್ಚಾಗಿದ್ದು, 850 ಗ್ರಾಹಕರು ಈವರೆಗೆ ಇದರ ಉಪಯೋಗ ಪಡೆದಿದ್ದಾರೆ. 

ಒಟ್ಟು 136 ಚಾರ್ಜಿಂಗ್ ಘಟಕಗಳನ್ನು ಅಳವಡಿಸಲಾಗಿದ್ದು, ಸದ್ಯ 72 ಘಟಕಗಳು ಕಾರ್ಯಾಚರಿಸುತ್ತಿವೆ. ಉಳಿದವುಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಈವರೆಗೆ ಈ ಚಾರ್ಜಿಂಗ್‌ ಘಟಕಗಳಿಗೆ ₹35 ಸಾವಿರ ವರಮಾನವೂ ಬಂದಿದೆ.

‘ಬೆಸ್ಕಾಂ ಕಚೇರಿಗಳ ಆವರಣದಲ್ಲಿ ಅಳವಡಿಸಲಾಗಿರುವ ಘಟಕಗಳ ಬಳಕೆ ಹೆಚ್ಚಾಗಿದೆ. ಬಿಬಿಎಂಪಿ, ಬಿಡಿಎ, ಕೆಐಎಡಿಬಿ ಸೇರಿದಂತೆ ಸರ್ಕಾರಿ ಕಚೇರಿಗಳ ಆವರಣದಲ್ಲಿ ಅಳವಡಿಸಿರುವ 54 ಘಟಕಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಬೆಸ್ಕಾಂನ ಸ್ಮಾರ್ಟ್‌ಗ್ರಿಡ್‌ ಮತ್ತು ಎಲೆಕ್ಟ್ರಿಕ್‌ ವಾಹನ ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ಸಿ.ಕೆ. ಶ್ರೀನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನೀವು ‘ಎಲೆಕ್ಟ್ರಿಫೈ’ ಆಗಲೇಬೇಕು

ಈ ಘಟಕಗಳನ್ನು ನೀವು ಬಳಸಬೇಕೆಂದರೆ, ನಿಮ್ಮ ಮೊಬೈಲ್‌ನಲ್ಲಿ ‘electreefi' ಆ್ಯಪ್ ಅಳವಡಿಸಿಕೊಳ್ಳಬೇಕು. ಗೂಗಲ್‌ ಪ್ಲೇ ಸ್ಟೋರ್‌ನಿಂದ ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. 

ನಗರದ ಎಲ್ಲೆಲ್ಲಿ ಚಾರ್ಜಿಂಗ್‌ ಘಟಕಗಳಿವೆ ಎಂಬ ಪಟ್ಟಿ ಇದರಲ್ಲಿ ತೋರಿಸುತ್ತದೆ. ಅದನ್ನು ತಲುಪುವ ನಕ್ಷೆಯನ್ನೂ ಇದು ತೋರಿಸುತ್ತದೆ. ಅಲ್ಲದೆ, ಯಾವ ಮಾದರಿಯ ಘಟಕ, ಬಳಕೆಗೆ ಲಭ್ಯವಿದೆಯೇ, ದರ ಎಷ್ಟು ಎಂಬ ಮಾಹಿತಿ ಸಿಗುತ್ತದೆ. ಒಂದು ಗಂಟೆ ಮೊದಲೇ ನೀವು ಘಟಕವನ್ನು ಈ ಆ್ಯಪ್‌ ಮೂಲಕ ಕಾಯ್ದಿರಿಸಬಹುದು. ಅಲ್ಲದೆ, ಚಾರ್ಜಿಂಗ್‌ ನಂತರ ಆನ್‌ಲೈನ್‌ನಲ್ಲಿಯೇ ಹಣ ಪಾವತಿಸಬೇಕಾಗುತ್ತದೆ. ನಗದು ವ್ಯವಹಾರಕ್ಕೆ ಅವಕಾಶವಿಲ್ಲ. ಕ್ಯೂಆರ್‌ ಕೋಡ್, ಒಟಿಪಿ ಅಥವಾ ಆರ್‌ಎಫ್‌ಐಡಿ ಬಳಸಿ ಶುಲ್ಕ ಪಾವತಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು