ದಾಬಸ್ಪೇಟೆ: ಹಬ್ಬ, ಜಾತ್ರೆ, ಸಮಾರಂಭಗಳು ಸಾಲು ಸಾಲಾಗಿ ಆರಂಭವಾಗಿರುವುದರಿಂದ ವೀಳ್ಯದೆಲೆಯ ಬೆಲೆ ಆಕಾಶಮುಖ ಮಾಡಿದೆ. ಒಂದು ಕಟ್ಟು ಎಲೆಯ ದರ ₹ 100 ದಾಟಿದೆ.

ಕಪ್ಪುಬಣ್ಣದ, ಚುಕ್ಕಿ ಇರುವ ಎಲೆಯೇ ಕಟ್ಟಿಗೆ ₹ 80 ರೂಪಾಯಿ ಇದ್ದರೆ, ಬಿಳಿ ಬಣ್ಣದ ಚಿಗುರೆಲೆಯ ಕಟ್ಟು ₹120ರಿಂದ ₹ 130ರವರೆಗೆ ಮಾರಾಟವಾಗುತ್ತಿದೆ. ಸಮಾರಂಭ ನಡೆಸುವವರಿಗೆ ಎಲೆಯ ಬೆಲೆಯೇ ಬಿಸಿಯಾಗಿದೆ. ಚಳಿಗಾಲದಲ್ಲಿ ವೀಳ್ಯದೆಲೆ ಬಳ್ಳಿಯಲ್ಲಿ (ಅಂಬು) ಹೊಸ ಚಿಗುರು ಬರುವುದಿಲ್ಲ. ಇದರಿಂದ ವೀಳ್ಯದೆಲೆ ಹೇರಳವಾಗಿ ಸಿಗುವುದಿಲ್ಲ ಇದು ಬೆಲೆ ಏರಿಕೆಗೆ ಕಾರಣವಾಗಿದೆ.

ಹಿಂದೆ ಒಂದು ಕಟ್ಟು ವೀಳ್ಯದೆಲೆ ದರ ₹ 60ರಿಂದ ₹ 70 ಇರುತ್ತಿತ್ತು. ಮೂರು ವರ್ಷಗಳಿಂದಲೂ ದರ ₹ 100ರ ಗಡಿ ದಾಟುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸಿದರು.

ದರ ಕಡಿಮೆ ಇದ್ದಾಗ ಕಟ್ಟಿನಲ್ಲಿ 100 ರಿಂದ 120 ಎಲೆ ಇರುತ್ತವೆ. ಎಲೆಯ ಗುಣಮಟ್ಟವೂ ಉತ್ತಮವಾಗಿರುತ್ತದೆ. ಆದರೆ, ದರ ಏರಿಕೆ ಆಗಿರುವುದರಿಂದ ಕಟ್ಟಿನಲ್ಲಿರುವ ಎಲೆಗಳ ಸಂಖ್ಯೆ ಕೂಡ ಕಡಿಮೆಯಾಗಿದೆ. ಜೊತೆಗೆ ಕಟ್ಟಿನ ಮಧ್ಯೆ ಸಣ್ಣ ಹಾಗೂ ಹರಿದ ಎಲೆಗಳನ್ನು ಜೋಡಿಸುತ್ತಿದ್ದಾರೆ ಎಂದು ಗ್ರಾಹಕರು ಅಳಲು ತೋಡಿಕೊಂಡರು.

‘ವೀಳ್ಯದೆಲೆಯ ತೋಟಗಳು ಕಡಿಮೆಯಾಗುತ್ತಿವೆ. ಮದುವೆ, ಗೃಹಪ್ರವೇಶ, ಜಾತ್ರೆಯಂತಹ ಸಮಾರಂಭಗಳು ಹೆಚ್ಚಾಗಿ ನಡೆಯುವುದರಿಂದ ವೀಳ್ಯದೆಲೆಗೆ ಬೇಡಿಕೆ ಹೆಚ್ಚಾಗಿ ದರ ಅಧಿಕಗೊಂಡಿದೆ. ಬೇಸಿಗೆ ಆರಂಭವಾಗಿರುವುದೂ ಪೂರೈಕೆ ಕುಸಿತಕ್ಕೆ ಕಾರಣ’ ಎಂದು ಮಾರಾಟಗಾರ ರಾಮಣ್ಣ ಹೇಳಿದರು.

ಡಿಸೆಂಬರ್ನಲ್ಲಿ ಕಟ್ಟಿಗೆ ₹ 50 ರಿಂದ ₹ 70ರ ಆಸುಪಾಸಿನಲ್ಲಿದ್ದ ದರವು ಜನವರಿ ವೇಳೆಗೆ ಹೆಚ್ಚಾಗಿತ್ತು. ಈಚೆಗೆ ನಿತ್ಯವು ದರ ಏರಿಕೆ ಆಗುತ್ತಿದೆ. ಸಾಧಾರಣ ಗುಣಮಟ್ಟದ ಎಲೆ ಕೂಡ ₹ 100ಕ್ಕೆ ಸಿಗುತ್ತಿಲ್ಲ. ಮುಂಗಾರು ಮಳೆ ಆರಂಭವಾಗಿ ಅಂಬುಗಳನ್ನು ಇಳಿಸಿ ಕಟ್ಟಿದ ಮೇಲೆ ಹೊಸ ಚಿಗುರು ಬಂದ ನಂತರವಷ್ಟೇ ದರ ಇಳಿಕೆ ಆಗಲಿದೆ ಎಂದರು.

ನಮಗೆ ಆಗಾಗ ಎಲೆ ಅಡಿಕೆ ತಿನ್ನುವ ಅಭ್ಯಾಸ. ಆದರೆ ವೀಳ್ಯದೆಲೆ ಬೆಲೆ ಏರುತ್ತಿದ್ದು ಹತ್ತು ರೂಪಾಯಿಗೆ ಐದಾರು ಎಲೆ ಕೊಡುತ್ತಿದ್ದಾರೆ. ಅನಿವಾರ್ಯವಾಗಿ ಬಳಕೆ ಕಡಿಮೆ ಮಾಡಿದ್ದೇವೆ.
–ಮುತ್ತಾಲಮ್ಮ, ಗ್ರಾಹಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.