ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವೈಪಿಂಗ್ ಮೆಷಿನ್‌ ಹಿಡಿದು ಬಂದ ಸುಲಿಗೆಕೋರರು!

Last Updated 8 ಆಗಸ್ಟ್ 2018, 19:48 IST
ಅಕ್ಷರ ಗಾತ್ರ

ಬೆಂಗಳೂರು: ಸ್ವೈಪಿಂಗ್ ಮೆಷಿನ್ ಹಿಡಿದುಕೊಂಡು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಟೈಟಾನ್ ವಾಚ್ ಕಂಪನಿಯ ಉದ್ಯೋಗಿಯೊಬ್ಬರಿಗೆ ಚಾಕುವಿನಿಂದ ಬೆದರಿಸಿ ₹16,400ನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

ಇಂದಿರಾನಗರ 12ನೇ ಮುಖ್ಯರಸ್ತೆಯಲ್ಲಿ ಆ.4ರಂದು ಈ ಘಟನೆ ನಡೆದಿದೆ. ಹಣ ಕಳೆದುಕೊಂಡ ದೆಹಲಿಯ ರಾಮ್‌ ತಿವಾರಿ, ಜೀವನ್‌ಬಿಮಾನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಗಳು ಹಾಗೂ ಬ್ಯಾಂಕ್ ಖಾತೆ ವಿವರ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ನಾನು ಮಾರಾಟ ಪ್ರತಿನಿಧಿಯಾಗಿ ದೆಹಲಿಯಲ್ಲಿ ಕೆಲಸ ಮಾಡುತ್ತೇನೆ. ಕಂಪನಿಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆ.2ರಂದು ನಗರಕ್ಕೆ ಬಂದಿದ್ದೆ. ಇಂದಿರಾನಗರದ ಹೋಟೆಲ್‌ನಲ್ಲಿ ತಂಗಿದ್ದ ನಾನು, ಆ.4ರಂದು ತರಬೇತಿ ಮುಗಿಸಿಕೊಂಡು ರಾತ್ರಿ 8.40ಕ್ಕೆ ಹೋಟೆಲ್ ಕಡೆಗೆ ನಡೆದು ಹೋಗುತ್ತಿದ್ದೆ’ ಎಂದು ರಾಮ್ ದೂರಿನಲ್ಲಿ ಹೇಳಿದ್ದಾರೆ.

‘ಬೈಕ್‌ನಲ್ಲಿ ಬಂದು ನನ್ನನ್ನು ಅಡ್ಡಗಟ್ಟಿದ ಇಬ್ಬರು, ಪರ್ಸ್ ಹಾಗೂ ಮೊಬೈಲ್ ಕೊಡುವಂತೆ ಬೆದರಿಸಿದರು. ₹ 470 ನಗದು ಇದ್ದ ಪರ್ಸನ್ನು ಅವರಿಗೆ ಕೊಟ್ಟೆ. ಈ ವೇಳೆ ಒಬ್ಬಾತ ಬ್ಯಾಗ್‌ನಿಂದ ಸ್ವೈಪಿಂಗ್ ಮೆಷಿನ್ ತೆಗೆದ. ಇನ್ನೊಬ್ಬ ಕುತ್ತಿಗೆ ಹತ್ತಿರ ಚಾಕು ಹಿಡಿದು, ಡೆಬಿಟ್ ಕಾರ್ಡ್‌ನ ಪಿನ್‌ ನಂಬರ್ ಹೇಳುವಂತೆ ಬೆದರಿಸಿದ. ನಾನು ಪಿನ್ ನಂಬರ್ ಹೇಳುತ್ತಿದ್ದಂತೆಯೇ ₹16,400ನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಹೊರಟು ಹೋದರು’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT