ಗುರುವಾರ , ಡಿಸೆಂಬರ್ 5, 2019
22 °C

ಮಾತು ಕೇಳದಿದ್ದರೆ ಚುನಾವಣೆ ಎದುರಿಸಿ: ವರಿಷ್ಠರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಸೂಚನೆಗಳನ್ನು ಪಾಲಿಸದೇ ಇದ್ದರೆ, ವಿಧಾನಸಭೆ ವಿಸರ್ಜಿಸುತ್ತೇವೆ, ಚುನಾವಣೆಗೆ ಸಿದ್ಧರಾಗಿ’ ಎಂದು ಕೆಲವು ಸಚಿವರಿಗೆ ಬಿಜೆಪಿ ವರಿಷ್ಠರು ಎಚ್ಚರಿಕೆ ನೀಡಿದ್ದಾರೆ.

ಗೋವಿಂದ ಕಾರಜೋಳ, ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ ಸವದಿ ಅವರಿಗೆ ಮುಂಬಡ್ತಿ ನೀಡಿದ ಬಗ್ಗೆ ಜಗದೀಶ ಶೆಟ್ಟರ್‌, ಆರ್‌.ಅಶೋಕ ಅವರು ಯಡಿಯೂರಪ್ಪ ಬಳಿ ಅಸಮಾಧಾನ ತೋಡಿಕೊಂಡಿದ್ದರು. ಯಡಿಯೂರಪ್ಪ ಅವರು ಇದನ್ನು ವರಿಷ್ಠರಿಗೆ ತಿಳಿಸಿದರು.

‘ವರಿಷ್ಠರು ಅದನ್ನು ಒಪ್ಪಲಿಲ್ಲ. ಕೊಟ್ಟ ಖಾತೆಯನ್ನು ವಹಿಸಿಕೊಂಡು ಕೆಲಸ ಮಾಡಬೇಕು. ಒತ್ತಡ ತಂತ್ರ ಅನುಸರಿಸಿದರೆ, ಅದನ್ನು ಒಪ್ಪುವುದಿಲ್ಲ. ಚುನಾವಣೆಗೆ ಹೋಗಬೇಕಾಗುತ್ತದೆ ಎಂಬುದನ್ನು ಅವರಿಗೆ ತಿಳಿಸಿ ಎಂಬ ಸಂದೇಶ ನೀಡಿದರು’ ಎಂದು ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು