ಬೆಂಗಳೂರು: ‘ಸ್ವಯಂ ಪ್ರೇರಿತ ರಕ್ತದಾನವನ್ನು ಉತ್ತೇಜಿಸುವುದು ಮತ್ತು ರಕ್ತದ ಬೇಡಿಕೆ ಪೂರೈಸುವಲ್ಲಿ ಸ್ಥಳೀಯ ರಕ್ತ ನಿಧಿಗಳನ್ನು ಬೆಂಬಲಿಸುವುದು ನಮ್ಮ ಗುರಿಯಾಗಿದೆ’ ಎಂದು ಕಿಸ್ತು ಜಯಂತಿ ಕಾಲೇಜು ಪ್ರಾಚಾರ್ಯ ಫಾದರ್ ಅಗಸ್ಟೀನ್ ಜಾರ್ಜ್ ತಿಳಿಸಿದರು.

ನಗರದ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ‘ಜಯಂತಿಯನ್ ವಿಸ್ತರಣಾ ಸೇವೆ (ಎನ್ಸಿಸಿ, ಎನ್ಎಸ್ಎಸ್, ವೈಆರ್ಸಿ, ಕೆಸಿಡಿಸಿ, ಯುಬಿಎ, ಮತ್ತು ಸಿಎಸ್ಎ) ಮತ್ತು ಲಯನ್ಸ್ ಬ್ಲಡ್ ಸೆಂಟರ್, ಸೇಂಟ್ ಜಾನ್ಸ್ ಆಸ್ಪತ್ರೆ, ಟಿಟಿಕೆ ಬ್ಲಡ್ ಸೆಂಟರ್, ಸೇಂಟ್ ಫಿಲೋಮಿನಾ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರಾಮಾ ಆ್ಯಂಡ್ ಆರ್ಥೊಪೆಡಿಕ್ಸ್ ಮತ್ತು ನಿಮ್ಹಾನ್ಸ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ‘ವಾರ್ಷಿಕ ರಕ್ತದಾನ ಶಿಬಿರ‘ ಉದ್ಘಾಟಿಸಿ ಮಾತನಾಡಿದರು.

ಶಿಬಿರದಲ್ಲಿ ಕ್ರಿಸ್ತು ಜಯಂತಿ ಕಾಲೇಜಿನ ವಿದ್ಯಾರ್ಥಿಗಳಲ್ಲದೇ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರೂ ರಕ್ತದಾನ ಮಾಡಿದರು. ಈ ವರ್ಷದ ಶಿಬಿರದಲ್ಲಿ ಒಟ್ಟು 792 ಯೂನಿಟ್ ರಕ್ತ ಸಂಗ್ರಹಿಸಿ, ಶಿಬಿರಕ್ಕೆ ಸಹಯೋಗ ನೀಡಿದ ರಕ್ತನಿಧಿ ಕೇಂದ್ರಗಳಿಗೆ ಹಸ್ತಾಂತರಿಸಲಾಯಿತು.

ರಕ್ತದಾನ ಶಿಬಿರದಲ್ಲಿ ‘ಜಯಂತಿಯನ್ ವಿಸ್ತರಣಾ ಸೇವೆ’(ಜೆಸ್) ಕೇಂದ್ರದ ನಿರ್ದೆಶಕ ಫಾ.ಜೈಸ್ ವಿ ಥಾಮಸ್ ಅಧ್ಯಾಪಕ ಸಂಯೋಜಕ ಪ್ರೊ.ಮಂಜುನಾಥ್ ಎಸ್., ಎನ್ಸಿಸಿ ಸಂಯೋಜಕ ಕ್ಯಾ. ಸರ್ವೇಶ್ ಬಿ.ಎಸ್, ಎನ್ಎಸ್ಎಸ್ ಸಂಯೋಜಕ ಶ್ರೀಧರ್ ಪಿ.ಡಿ., ವೈಆರ್ಸಿ ಸಂಯೋಜಕ ಪ್ರೊ.ಧನಪಾಲ್, ಕೆಸಿಡಿಸಿ ಸಂಯೋಜಕ ಡಾ.ಅಬ್ದುಲ್ ರಝಾಕ್, ಯುಬಿಎ ಸಂಯೋಜಕ ಪ್ರೊ.ಚಂದ್ರಶೇಖರ್ ಎನ್., ಮತ್ತು ಸಿಎಸ್ಎ ಸಂಯೋಜಕ ಪ್ರೊ.ಶಶಿಕುಮಾರ್ ಎಂ. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.