ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಃಸ್ವಪ್ನದಂತೆ ಕಾಡುವ ವಲಸೆ ವಿಭಾಗದ ಪ್ರಕ್ರಿಯೆ: ಕಿರಣ್ ಮಜುಂದಾರ್ ಶಾ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಚಹರೆ ಗುರುತಿಸುವ ತಂತ್ರಜ್ಞಾನ ಅಳವಡಿಕೆಗೆ ಕಿರಣ್‌ ಮಜುಂದಾರ್‌ ಶಾ ಸಲಹೆ
Last Updated 30 ಏಪ್ರಿಲ್ 2022, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗ ವಲಸೆ ವಿಭಾಗದ ಪ್ರಕ್ರಿಯೆ ದುಃಸ್ವಪ್ನದಂತೆ ಕಾಡುತ್ತಿದೆ. ದಕ್ಷತೆಗೆ ಹೆಸರುವಾಸಿಯಾಗಿದ್ದ ನಮ್ಮ ನಗರದ ಗೌರವಕ್ಕೆ ಇದು ಚ್ಯುತಿ ತರುವಂತಿದೆ’ ಎಂದು ‘ಬಯೋಕಾನ್‌’ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ವಲಸೆ ವಿಭಾಗದ ಪರಿಶೀಲನಾ ಪ್ರಕ್ರಿಯೆಗಳು ಡಿಜಿಟಲೀಕರಣಗೊಂಡು ಸ್ಮಾರ್ಟ್‌ ಆಗಬೇಕಿವೆ. ಚಹರೆ ಗುರುತಿಸುವ ತಂತ್ರಜ್ಞಾನ ಹಾಗೂ ಬಯೊಮೆಟ್ರಿಕ್‌ಗಳನ್ನು ಬಳಸುವ ಮೂಲಕ ಪ್ರವೇಶ ಮತ್ತು ನಿರ್ಗಮನ ಪ್ರಕ್ರಿಯೆಯನ್ನು ಇನ್ನಷ್ಟು ದಕ್ಷವಾಗಿರುವಂತೆ ರೂಪಿಸಬೇಕು’ ಎಂದೂ ಸಲಹೆ ನೀಡಿದ್ದಾರೆ. ಈ ಟ್ವೀಟ್‌ಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್‌) ಆಡಳಿತ ನಿರ್ದೇ ಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರಿ ಮಾರಾರ್ ಅವರನ್ನು ಟ್ಯಾಗ್‌ ಮಾಡಿದ್ದಾರೆ. ಇದಕ್ಕೆ ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣ ಸಂಸ್ಥೆಯು, ‘ಕಿರಣ್‌ ಅವರೇ, ಈ ವಿಚಾರವನ್ನು ತಿಳಿಸಿದ್ದಕ್ಕೆ ಧನ್ಯವಾದ. ನಿಮ್ಮ ಪ್ರತಿಕ್ರಿಯೆ ಗಳನ್ನು ನಮ್ಮ ಕಾರ್ಯಾಚರಣೆ ವಿಭಾ ಗದ ಗಮನಕ್ಕೆ ತರುತ್ತೇವೆ’ ಎಂದು ತಿಳಿಸಿದೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅನೇ ಕರು ಕಿರಣ್‌ ಮಜುಂದಾರ್‌ ಶಾ ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

‘ಒಮ್ಮೆ ಬ್ರಿಟನ್‌ಗೆ ತೆರಳುವ ಸಲು ವಾಗಿ ನಾನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದಲ್ಲಿ ಪರಿ ಶೀಲನೆಗೆ ಒಳಪಡಬೇಕಾಯಿತು. ವಲಸೆ ಅಧಿಕಾರಿಯೊಬ್ಬರು (ತುಸು ಅಸಹಜ ನಡವಳಿಕೆ ಹೊಂದಿದ್ದರು) ನಾನು ಲಂಡನ್‌ ತಲುಪಿದ ಬಳಿಕ ಭಾರತದಲ್ಲಿ ಬಳಸುವ ನನ್ನ ಮೊಬೈಲ್‌ ನಂಬರ್‌ಗೆ ಖಾಸಗಿಯಾಗಿ ಸಂದೇಶ ಕಳುಹಿಸಿದರು. ಡೇಟಾ ಖಾಸಗಿತನದ ಕತೆ ಏನಾಯಿತು?’ ಎಂದು ಚಂದ್ರಲೇಖ ರಾಮಲಿಂಗಮ್‌ ಅವರು ಟ್ವೀಟ್‌ ಮಾಡಿದ್ದಾರೆ.

‘ನಿಮಗಿಲ್ಲಿ ಗಣ್ಯಾತಿಗಣ್ಯರಂತೆ ಉಪ ಚಾರ ಸಿಗದಿದ್ದಾಗ ಈ ರೀತಿ ಹೊಟ್ಟೆ ಉರಿಯುವುದು ಸಹಜ. ಇಲ್ಲೇನೊ ಬೇರೆಯೇ ವಾಸನೆ ಇದೆ’ ಎಂದು ಬಿಂದು ಆದರ್ಶ್‌ ಅವರು ಪ್ರತಿಕ್ರಿಯಿಸಿದ್ದಾರೆ.

‘ಒಬ್ಬರು ದೇಶದಿಂದ ಹೊರಗೆ ಹೋಗುವಾಗಲೂ ವಲಸೆ ಪರಿಶೀಲನೆ ಪ್ರಕ್ರಿಯೆಗೆ ಒಳಪಡುವ ಅಗತ್ಯವಾದರೂ ಏನು?, ಕಸ್ಟಮ್ಸ್‌ ವಿಭಾಗದಲ್ಲಂತೂ ಇನ್ನಷ್ಟು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ. ನಗರಕ್ಕೆ ಬರುವ ಎಲ್ಲ ಪ್ರಯಾಣಿಕರೆಲ್ಲರೂ ಒಂದೇ ಎಕ್ಸ್‌–ರೇ ಯಂತ್ರದ ಮೂಲಕ ಪರಿಶೀಲನೆಗೆ ಒಳಪಡಬೇಕು. ಎಲ್ಲರನ್ನೂ
ಕಳ್ಳಸಾಗಣೆ ಮಾಡುವವರಂತೆ ನೋಡ ಲಾಗುತ್ತದೆ. ಹೆಚ್ಚು ಯಂತ್ರಗಳನ್ನು ಹಾಗೂ ಅಧಿಕಾರಿಗಳನ್ನು ಒದಗಿಸಬಹು ದಲ್ಲವೇ’ ಎಂದು ಅಮಿತ್‌ ತ್ಯಾಗಿ ಅವರು ಪ್ರಶ್ನಿಸಿದ್ದಾರೆ.

‘ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ.ಸಿಂಧಿಯಾ ಮತ್ತು ರಾಜ್ಯ ಸಚಿವ ಜನರಲ್‌ ವಿ.ಕೆ.ಸಿಂಗ್‌ ಅವರು ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸುವಂತೆ ವಿಮಾನಯಾನ ಸಚಿವಾಲಯದಲ್ಲಿ ಸುಧಾರಣೆ ತರುವ ಮೂಲಕ ಅಸ್ತಿತ್ವವನ್ನು ತೋರಿಸಬೇಕು. ಎಲ್ಲದರಲ್ಲೂ ರಾಜಕೀಯ ಮಾಡುವ ಬದಲು ಸರ್ಕಾರದ ಮೌಲ್ಯವನ್ನು ಹೆಚ್ಚಿಸುವಂತಹ ಕಾರ್ಯದಕ್ಷತೆಯನ್ನು ತೋರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರಿಗೆ ಸೂಚಿಸಬೇಕು’ ಎಂದು ಶ್ರೀಧರ್‌ ಡಿಪಿಎಸ್‌ ಅವರು ಸಲಹೆ ನೀಡಿದ್ದಾರೆ.

‘ನಾನಿದನ್ನು ಸಂಪೂರ್ಣ ಒಪ್ಪುತ್ತೇನೆ. 30 ವರ್ಷಗಳ ಹಿಂದೆ ನಾನು ದುಬೈಗೆ ಮೊದಲ ಬಾರಿ ಹೋಗಿದ್ದೆ. ಹಾಗೂ ಈಗ ಅಲ್ಲಿನ ವಲಸೆ ವಿಭಾಗದವರು ನನ್ನ ಕಣ್ಣುಗಳನ್ನು ಸ್ಕ್ಯಾನ್‌ ಮಾಡಿ ಇಡೀ ಪ್ರಕ್ರಿಯೆಯನ್ನು 50 ಸೆಕೆಂಡ್‌ಗಳಿಗೂ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸುತ್ತಾರೆ. ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಭಾರತವೂ ತಂತ್ರಜ್ಞಾನ ಅಳವಡಿಸಿಕೊಳ್ಳುವುದಕ್ಕೆ ಇದು ಸೂಕ್ತ ಸಮಯ’ ಎಂದು ಗಿರೀಶ್‌ ನಾರಾಯಣನ್‌ ಅವರು ಅನುಭವ ಹಂಚಿಕೊಂಡಿದ್ದಾರೆ.

ಗಮನ ಸೆಳೆದ ಟ್ವೀಟ್‌ಗಳು

ಕಳೆದ ವಾರ ಪುಣೆಗೆ ವಿಮಾನದಲ್ಲಿ ತೆರಳಿ ಮರಳಿದೆ. ಟೇಕ್‌ ಆಫ್‌ ಆಗಲು ಒಂದನೇ ರನ್‌ವೇಯ ಒಂದು ತುದಿಯಿಂದ ಎರಡನೇ ರನ್‌ವೇಯ ಇನ್ನೊಂದು ತುದಿ ತಲುಪಲು 20 ನಿಮಿಷಗಳು ಬೇಕಾದವು. ಇಲ್ಲಿ ಬಂದಿಳಿಯುವಾಗಲೂ ಅಂತಹದ್ದೇ ಅನುಭವವಾಯಿತು. ಇದರಿಂದ ಸಮಯ ಮತ್ತು ಇಂಧನ‌ ಎರಡೂ ವ್ಯರ್ಥ. ಅತ್ಯಂತ ದಕ್ಷ ಎಂದು ಕರೆಯಿಸಿಕೊಳ್ಳುವ ವಿಮಾನನಿಲ್ದಾ ಣದಲ್ಲಿ ಇದನ್ನು ನಿರೀಕ್ಷೆ ಮಾಡಲಾಗದು. ಶೌಚಾಲಯಗಳೂ ಕೆಟ್ಟವಾಸನೆಯಿಂದ ಕೂಡಿದ್ದವು

ಶಶಿಧರ ರಾವ್‌

ವಲಸೆ ವಿಭಾಗದಲ್ಲಿ ತಗುಲುವ ಸಮಯಕ್ಕೂ ನಿರ್ದಿಷ್ಟ ಸಮಯದಲ್ಲಿ ಎಷ್ಟು ವಿಮಾನಗಳು ಹಾರಾಟ ನಡೆಸುತ್ತವೆ ಎಂಬುದಕ್ಕೂ ನೇರ ಸಂಬಂಧವಿದೆ. ಕೆಲವೊಮ್ಮೆ ನಾನು ಗಂಟೆಗಟ್ಟಲೆ ಕಾದಿದ್ದೇನೆ. ಕೆಲವೊಮ್ಮೆ ಹತ್ತೇ ನಿಮಿಷಗಳಲ್ಲಿ ಎಲ್ಲ ಪ್ರಕ್ರಿಯೆಗಳೂ ಮುಗಿದಿವೆ. ಇವೆಲ್ಲವೂ ಅದೃಷ್ಟವನ್ನು ಅವಲಂಬಿಸಿದೆ. ಜಗತ್ತಿನಾದ್ಯಂತ ಇದೇ ರೀತಿ ಇದೆ

ರಾನಕ್‌ ಮಹಾಜನ್‌

ಖಂಡಿತ! ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ವಿಸ್ತರಿಸುವ ನಮ್ಮ ಮಹತ್ವಾಕಾಂಕ್ಷೆಯ ಯೋಜನೆಯ ಸಂದರ್ಭದಲ್ಲಂತೂ ಇದು ತುರ್ತು ಅಗತ್ಯ.

ಬಿನು ಎಂ.ಆರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT