ಬೆಂಗಳೂರು: ನಗದು ರಹಿತ ಪ್ರಯಾಣಕ್ಕಾಗಿ ಇರುವ ‘ನಮ್ಮ ಮೆಟ್ರೊ ಸ್ಮಾರ್ಟ್ಕಾರ್ಡ್’ ಬಳಸಲು ಸಾಧ್ಯವಾಗದಷ್ಟು ಹಳೆಯದಾದರೆ ಯಾವುದೇ ಶುಲ್ಕ ಪಾವತಿಸದೇ ಬದಲಾಯಿಸುವ ಅವಕಾಶವನ್ನು ಬಿಎಂಆರ್ಸಿಎಲ್ ನೀಡಿದೆ.

ಪುನರ್ಭರ್ತಿ ಮಾಡಬಹುದಾದ ಈ ಕಾರ್ಡ್ಗಳಿಗೆ ಹಣ ತುಂಬಲು ಸಾಧ್ಯವಾಗದಷ್ಟು ಹಾಳಾದ ಕಾರ್ಡ್ ಬದಲಾಯಿಸಬಹುದು. ಹಳೇ ಕಾರ್ಡ್ನಲ್ಲಿ ಉಳಿಕೆಯಾಗಿರುವ ಹಣವನ್ನು ಹೊಸ ಕಾರ್ಡ್ಗೆ ವರ್ಗಾವಣೆ ಮಾಡಲಾಗುತ್ತದೆ.

ನಿತ್ಯ ಮೆಟ್ರೊ ಮೂಲಕ ಸಂಚರಿಸುವವರು ಟಿಕೆಟ್ ಕೌಂಟರ್ಗಳಲ್ಲಿ ಪ್ರತಿಬಾರಿ ಸರತಿಯಲ್ಲಿ ನಿಂತು ಪ್ರಯಾಣ ದರ ಪಾವತಿಸಿ ಟೋಕನ್ ಪಡೆಯುವುದನ್ನು ತಪ್ಪಿಸುವುದಕ್ಕಾಗಿ ‘ಇಂಟಿಗ್ರೇಟೆಡ್ ಸಿಂಗಲ್ ವ್ಯಾಲೆಟ್’ ಆಗಿ ಕಾರ್ಯನಿರ್ವಹಿಸುವ ಕಾರ್ಡ್ಗಳನ್ನು ಮೆಟ್ರೊ ಪರಿಚಯಿಸಿತ್ತು. ಒಂದು ಬಾರಿ ಹಣ ತುಂಬಿದರೆ ಅದು ಖಾಲಿ ಆಗುವವರೆಗೆ ಬಳಸಬಹುದು. ಖಾಲಿ ಆದಾಗ ಆನ್ಲೈನ್ ಮೂಲಕ ಇಲ್ಲವೇ ಮೆಟ್ರೊ ನಿಲ್ದಾಣಗಳಲ್ಲಿ ಪುನರ್ ಭರ್ತಿ ಮಾಡಿಕೊಳ್ಳಬಹುದು.

‘ಮೆಟ್ರೊ ಕಾರ್ಡ್ಗಳಿಗೆ ಬಳಕೆಯ ಅವಧಿ ಇಷ್ಟೇ ಎಂದು ನಿಗದಿ ಇಲ್ಲ. ಕಾರ್ಡ್ ಸದೃಢವಾಗಿರುಷ್ಟು ಸಮಯ ಬಳಸಬಹುದು. ಸ್ವಯಂಚಾಲಿತ ಶುಲ್ಕ ಸಂಗ್ರಹ (ಎಎಫ್ಸಿ) ಗೇಟ್ಗಳಲ್ಲಿ ಕಾರ್ಡ್ ರೀಡ್ ಆಗದೇ ಇದ್ದರೆ ಬಿಎಂಆರ್ಸಿಎಲ್ನಿಂದಲೇ ಹೊಸ ಕಾರ್ಡ್ ನೀಡಲಾಗುತ್ತದೆ. ಆದರೆ, ತಾಂತ್ರಿಕ ಕಾರಣಗಳನ್ನು ಹೊರತುಪಡಿಸಿ ಕಾರ್ಡ್ ಮುರಿಯುವುದು ಇನ್ನಿತರ ಕಾರಣಗಳಿಂದ ಕಾರ್ಡ್ ನಿರುಪಯೋಗಿಯಾದರೆ ಶುಲ್ಕರಹಿತವಾಗಿ ಹೊಸಕಾರ್ಡ್ ನೀಡಲಾಗುವುದಿಲ್ಲ’ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಮೆಟ್ರೊ ನಿಲ್ದಾಣದಲ್ಲಿ ನಾನು ಕಾರ್ಡ್ ರೀಚಾರ್ಜ್ ಮಾಡಲು ಮೂರು ಬಾರಿ ಪ್ರಯತ್ನಿಸಿದ್ದೆ. ಆದರೆ, ಆಗಿರಲಿಲ್ಲ. ತಾಂತ್ರಿಕ ಕಾರಣದಿಂದ ಆಗುತ್ತಿಲ್ಲ ಎಂದು ಅಲ್ಲಿನ ಸಿಬ್ಬಂದಿ ಯಾವುದೇ ಶುಲ್ಕ ಪಡೆಯದೇ ಹೊಸ ಕಾರ್ಡ್ ನೀಡಿದರು. ಹಳೇ ಕಾರ್ಡ್ನಲ್ಲಿದ್ದ ₹ 83 ಕೂಡ ಹೊಸ ಕಾರ್ಡ್ಗೆ ವರ್ಗಾವಣೆಗೊಂಡಿದೆ. ಹೊಸ ಕಾರ್ಡ್ ರೀಚಾರ್ಜ್ ಮಾಡಿಕೊಂಡು ಬಂದೆ’ ಎಂದು ಹೊಸ ಕಾರ್ಡ್ ಪಡೆದ ಪ್ರಯಾಣಿಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.