ಬೆಂಗಳೂರು: ಬಿಎಂಎಸ್ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯವು ಬೋಧಕ ಸಿಬ್ಬಂದಿಗೆ ‘ರೀಬೂಟ್ 2025’ ಹ್ಯಾಕಥಾನ್ ಆಯೋಜಿಸಿತ್ತು.

ಸ್ಪರ್ಧೆಯಲ್ಲಿ 54 ತಂಡಗಳು ತಮ್ಮ ವಿಚಾರವನ್ನು ಪ್ರಸ್ತುತ ಪಡಿಸಿದವು. ಅಂತಿಮ ಸುತ್ತಿಗೂ ಮೊದಲು ಎಲ್ಲ ತಂಡಗಳು ಎರಡು ಸುತ್ತುಗಳನ್ನು ಪೂರ್ಣಗೊಳಿಸಿದ್ದವು. ಉತ್ಪನ್ನ ಅಭಿವೃದ್ಧಿ ಮತ್ತು ಉದ್ಯಮಶೀಲತೆಗೆ ಕಾರಣವಾಗುವ ಅತ್ಯುತ್ತಮ ವಿಚಾರಗಳನ್ನು ಮಂಡಿಸಿದ ತಂಡಗಳಿಗೆ ₹1.8 ಲಕ್ಷ ಬಹುಮಾನ ವಿತರಿಸಲಾಯಿತು.

ಯೂನಿಸಿಸ್ನ ಎನ್.ಎಸ್. ಶ್ರೀವತ್ಸ, ಎಸ್ಎಪಿ ಲ್ಯಾಬ್ಸ್ನ ಹಿರಿಯ ನಿರ್ದೇಶಕ ಪ್ರಸನ್ನ ಮಾವಿನಕುಳಿ, ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ನ ಪ್ರಶಾಂತ್ ಕಮ್ಮಂಪತಿ, ಒರಾಕಲ್ನ ಅನುಪ್ ಮಿಶ್ರಾ ಅವರು ತೀರ್ಪುಗಾರರಾಗಿದ್ದರು. ಅಭಿಲಾಷ್ ಚಕ್ಕನ್, ಜಯಕರ ಕಿನಿ, ಸೀಮಾ ಕೊಹ್ಲಿ, ಜಯಸುಧಾ ಮತ್ತು ಹೇಮಂತ್ ಬನ್ಸಾಲ್ ಅವರು ತಂಡಗಳಿಗೆ ಮಾರ್ಗದರ್ಶನ ನೀಡಿದರು.

ಯೂನಿಸಿಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಲಲಿತಾನಂದ ಮೋಸೆಸ್, ಬಿಎಂಎಸ್ಐಟಿಯ ಅವಿರಾಮ ಶರ್ಮಾ, ಪ್ರಾಂಶುಪಾಲ ಎಚ್.ಎ. ಸಂಜಯ್, ಉಪ ಪ್ರಾಂಶುಪಾಲ ಅನಿಲ್ ಜಿ.ಎನ್, ಮುಖ್ಯ ಸಂಯೋಜಕ ಸನೀಶ್ ಕ್ಲೀಟಸ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.