ಬೆಂಗಳೂರು: ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳನ್ನು ಮೊಬೈಲ್ ಆ್ಯಪ್ ಮೂಲಕ ವಿತರಿಸಲು ಬಿಎಂಟಿಸಿ ಕ್ರಮ ಕೈಗೊಂಡಿದೆ.
ಪ್ರಯಾಣಿಕರಿಗೆ ಪಾಸುಗಳು ಸುಲಭವಾಗಿ ದೊರೆಯಲು ಹಾಗೂ ನಗದು ರಹಿತ, ಕಾಗದ ರಹಿತ ಮತ್ತು ಸಂಪರ್ಕ ರಹಿತ ವಹಿವಾಟಿಗಾಗಿ, ಸೆಪ್ಟೆಂಬರ್ 15ರಿಂದ ಅನ್ವಯವಾಗುವಂತೆ ಡಿಜಿಟಲ್ ವ್ಯವಸ್ಥೆಯಲ್ಲಿ ಪಾಸುಗಳ ವಿತರಣೆಯಾಗಲಿದೆ.
ಮೊಬೈಲ್‌ನಲ್ಲಿ ಪ್ಲೇಸ್ಟೋರ್‌ಗೆ ಹೋಗಿ ಟುಮ್ಯಾಕ್ ಆ್ಯಪ್ (Tummoc App) ಡೌನ್ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಪಾಸ್ ಆಯ್ಕೆ ಮಾಡಿಕೊಂಡು ವಿವರ ಭರ್ತಿ ಮಾಡಿ ಭಾವಚಿತ್ರ ಸಹಿತ ಅಪ್‌ಲೋಡ್ ಮಾಡಬೇಕು. ದೃಢೀಕರಣಗೊಂಡ ಬಳಿಕ ಪಾಸ್ ಮೊತ್ತ ಪಾವತಿಸಬೇಕು.
ದೈನಿಕ ಪಾಸುಗಳನ್ನು ಇ.ಟಿ.ಎಂ ಯಂತ್ರದ ಮೂಲಕ ನಿರ್ವಾಹಕರಿಂದ ಪಡೆದುಕೊಳ್ಳಬಹುದು. ಮಾಹಿತಿಗಾಗಿ https://mybmtc.karnataka.gov.in ಸಂಪರ್ಕಿಸಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.