ಶುಕ್ರವಾರ, ಡಿಸೆಂಬರ್ 6, 2019
20 °C

ಬಿಎಂಟಿಸಿ: ಅಕ್ಟೋಬರ್‌ ತಿಂಗಳಲ್ಲಿ ₹ 10.79 ಲಕ್ಷ ದಂಡ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಂಟಿಸಿ ತನಿಖಾ ಸಿಬ್ಬಂದಿ ಅಕ್ಟೋಬರ್‌ನಲ್ಲಿ ನಡೆಸಿದ ತಪಾಸಣೆ ವೇಳೆ 5,557 ಟಿಕೆಟ್‌ ರಹಿತ ಪ್ರಯಾಣಿಕರಿಂದ ₹10.50 ಲಕ್ಷ ದಂಡ ಸಂಗ್ರಹಿಸಿದೆ. ನಿರ್ವಾಹಕರ ವಿರುದ್ಧ 2,983 ಪ್ರಕರಣಗಳನ್ನು ದಾಖಲಿಸಿದೆ.

ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 286 ಪುರುಷ ಪ್ರಯಾಣಿಕರಿಂದ ₹28,600 ಸಂಗ್ರಹಿಸಿದೆ. ಎರಡೂ ದಂಡದಿಂದ ಒಟ್ಟು ₹10.79 ಲಕ್ಷ ದಂಡ ಸಂಗ್ರಹವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು