ಪೀಣ್ಯ ದಾಸರಹಳ್ಳಿ: ದೊಡ್ಡಬಿದರುಕಲ್ಲಿನಲ್ಲಿರುವ ಹಿತ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಕ್ಕೆ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೃತದೇಹವನ್ನು ದಾನವಾಗಿ ನೀಡಲಾಗಿದೆ.

ಟ್ರಸ್ಟ್ ಅಧ್ಯಕ್ಷ ಡಾ. ಮಹಾಂತೇಶ್ ರಾಮಣ್ಣವರ್ ಮಾತನಾಡಿ, ‘ವಿದ್ಯಾರ್ಥಿಗಳ ಶೈಕ್ಷಣಿಕ, ಸಂಶೋಧನಾ ಉದ್ದೇಶಕ್ಕೆ ಇದರಿಂದ ನೆರವಾಗಲಿದೆ. ಮೃತದೇಹ ಇರದಿದ್ದರೆ ಅಧ್ಯಯನ, ಸಂಶೋಧನೆಯೇ ನಡೆಯುವುದಿಲ್ಲ’ ಎಂದು ತಿಳಿಸಿದರು

‘ಬೆಂಗಳೂರಿನಲ್ಲಿರುವ ಆಯುರ್ವೇದ ಕಾಲೇಜುಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಮೃತದೇಹದ ಕೊರತೆ ಎದುರಿಸುತ್ತಿವೆ. ಸರ್ಕಾರಿ ಕಾಲೇಜುಗಳು ಮೃತದೇಹಗಳ ಕೊರತೆಯನ್ನು ಹೇಗೋ ನಿಭಾಯಿಸಿಕೊಳ್ಳುತ್ತವೆ. ಆದರೆ, ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಇದು ಸುಲಭವಲ್ಲ. ದೇಹದಾನದ ಕುರಿತು ಇರುವ ತಪ್ಪು ಮಾಹಿತಿ ಹೋಗಬೇಕು. ದೇಹದಾನಕ್ಕೆ ದಾನಿಯ ಜೊತೆಗೆ ಕುಟುಂಬದ ಎಲ್ಲಾ ಸದಸ್ಯರ ಲಿಖಿತ ಒಪ್ಪಿಗೆ ಕಡ್ಡಾಯ’ ಎಂದರು.

ಕಾಲೇಜು ಮುಖ್ಯಸ್ಥ ಡಾ. ಸೀತಾರಾಮಯ್ಯ ಆರ್., ಕಾರ್ಯದರ್ಶಿ ಬಸವರಾಜೇಂದ್ರ, ಟ್ರಸ್ಟಿಗಳಾದ ನಾಗೇಶ್, ಕೋಟೇಶ್ವರ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀ ಬಾಪು ಹುಲಕುಂಡ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.