ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೌನ್ಸ್‌’ ಮೇಲೆ ಗ್ರಾಹಕರಿಗೆ ಏಕಿಷ್ಟು ಕೋಪ?

ಇದು ಬಾಡಿಗೆ ವಾಹನಗಳ ಜಮಾನಾ
Last Updated 3 ಆಗಸ್ಟ್ 2019, 6:58 IST
ಅಕ್ಷರ ಗಾತ್ರ

ಒಂದು ಕಾಲಕ್ಕೆ ಸ್ವಂತ ವಾಹನ ಹೊಂದುವ ಭಾರಿ ಖಯಾಲಿ ಹೊಂದಿದ್ದ ಬೆಂಗಳೂರಿಗರು ಟ್ರಾಫಿಕ್‌ ಮತ್ತು ಪಾರ್ಕಿಂಗ್‌ ಕಿರಿಕಿರಿಯಿಂದಾಗಿ ಮರಳಿ ಬಾಡಿಗೆ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಸ್ವಂತ ಕಾರನ್ನು ಮನೆಯಲ್ಲಿ ಬಿಟ್ಟು ಓಲಾ, ಉಬರ್‌ನಂತಹ ಆ್ಯಪ್‌ ಆಧಾರಿತ ಕಾರ್‌, ಬೈಕ್‌ ಟ್ಯಾಕ್ಸಿ, ಸೈಕಲ್‌ ಮೊರೆ ಹೋಗುತ್ತಿದ್ದಾರೆ. ಯುವಕರಿಗಂತೂ ಡ್ರೈವ್‌ ಝಿ, ಬೌನ್ಸ್, ವೋಗೊ, ಟ್ವಿಕ್, ಓಎನ್‍ಎನ್, ರಾಯಲ್ ಬ್ರದರ್ಸ್ ಬೈಕ್‌ ಟ್ಯಾಕ್ಸಿ ಅಚ್ಚುಮೆಚ್ಚು.

ಬೆಂಗಳೂರಿನಲ್ಲಿ ಈಗ ಆ್ಯಪ್‌ ಆಧಾರಿತ ಬೈಕ್‌ ಟ್ಯಾಕ್ಸಿಗಳು ಜನಪ್ರಿಯವಾಗಿವೆ. ಯುವಕ–ಯುವತಿಯರಂತೂ ಆಟೊ ಬಿಟ್ಟು ಕೈಗೆಟಕುವ ದರದಲ್ಲಿ ದೊರೆಯುವ ಬೌನ್ಸ್‌, ವೋಗೊ ಮತ್ತುಡ್ರೈವ್‌–ಝಿ ಬಾಡಿಗೆ ಬೈಕ್ ಏರುತ್ತಿದ್ದಾರೆ. ಸದ್ಯ ಬೈಕ್‌ ಟ್ಯಾಕ್ಸಿಗಳು ಯುವಜನತೆಯ ಫೇವರೀಟ್‌ ಸವಾರಿಗಳಾಗಿವೆ.

ಬೈಕ್‌ ಟ್ಯಾಕ್ಸಿ ಏಕೆ ಅಚ್ಚುಮೆಚ್ಚು?

ಮೊಬೈಲ್‌ ಆ್ಯಪ್‌ ಮೂಲಕ ಬೈಕ್-ಟ್ಯಾಕ್ಸಿ ಬುಕ್ ಮಾಡಬಹುದು. ಆಧಾರ್‌ ಕಾರ್ಡ್‌ ಮತ್ತು ಡ್ರೈವಿಂಗ್ ಲೈಸನ್ಸ್ ಪ್ರತಿ ನೀಡಿದರೆ ಸಾಕು. ಡ್ರೈವ್-ಝಿ ಮತ್ತು ರಾಯಲ್ ಬ್ರದರ್ಸ್‌ ಬೈಕ್‌ ಮನೆ ಬಾಗಿಲಿಗೆ ಬಂದು ನಿಲ್ಲುತ್ತವೆ. ಬೌನ್ಸ್ ಮತ್ತು ವೋಗೊ ಬೈಕ್‌ಗಳನ್ನು ಯಾವುದೇ ಸ್ಥಳದಲ್ಲಿ ಪಾರ್ಕ್ ಮಾಡಿದರೂ ಸಂಸ್ಥೆಯ ಟೋಯಿಂಗ್‌ ಸಿಬ್ಬಂದಿ ಅವನ್ನು ತಮ್ಮ ಖಾಸಗಿ ನಿಲ್ದಾಣಗಳಿಗೆ ಸಾಗಿಸುತ್ತಾರೆ.ಈ ನಿಯಮವೇ ಮಾರಕವಾಗಿ ಪರಿಣಮಿಸಿದೆ.

ಅಲ್ಲದೇ ವೋಗೊ ಮತ್ತು ಬೌನ್ಸ್ ಇಂಧನ ವೆಚ್ಚವನ್ನು ಕಂಪನಿಯೇ ಭರಿಸುತ್ತದೆ. ಬೈಕ್‌ ಟ್ಯಾಕ್ಸಿ ಓಡಿಸಲು ಪ್ರತ್ಯೇಕ ಬೀಗ ಅಗತ್ಯ ಇಲ್ಲ. ಕೀ-ಪ್ಯಾಡ್‍ ಮೂಲಕ ಮೊಬೈಲ್‌ಗೆ ಬಂದ ಒ.ಟಿ.ಪಿ ಸಂಖ್ಯೆ ಒತ್ತಿದರೆ ಸಾಕು. ಸವಾರಿಗೆ ಬೈಕ್‌ ರೆಡಿ.

‘ಕೇವಲ ₹5ಗೆ ಒಂದು ಕಿ.ಮಿ ಕ್ರಮಿಸುವ ಬಾಡಿಗೆ ಬೈಕ್‌ ಟ್ಯಾಕ್ಸಿಗಳ ಮೇಲೆ ಅಟೊ ಚಾಲಕರ ಕೆಂಗಣ್ಣು ಇದೆ’ ಎಂದು ಈ ಕಂಪನಿಗಳ ನೌಕರರು ಗುಮಾನಿ ವ್ಯಕ್ತಪಡಿಸುತ್ತಾರೆ. ಪ್ರಯಾಣಿಕರ ಅನೂಕೂಲಕ್ಕಾಗಿಯೇ ಆರಂಭವಾದ ನವೋದ್ಯಮಗಳು ಒದಗಿಸುತ್ತಿರುವ‘ಲಾಸ್ಟ್ ಮೈಲ್ ಕನೆಕ್ಟಿವಿಟಿ’ ಸಾರಿಗೆ ವ್ಯವಸ್ಥೆಯನ್ನು ಅನಾಗರಿಕ ನಡವಳಿಕೆಯಿಂದ ನಮ್ಮ ಕೈಯಾರ ನಾವೇ ಕತ್ತು ಹಿಸುಕಿದಂತಾಗುತ್ತದೆ.

- ರವಿಚಂದ್ರ ಎಂ. ಸಹಾಯಕ ಪ್ರಾಧ್ಯಾಪಕ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜು

***

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT