ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿದುಳಿನ ಕ್ಯಾನ್ಸರ್‌ ಜಯಿಸಿದ ಬಾಲಕ

Last Updated 29 ಮಾರ್ಚ್ 2023, 20:11 IST
ಅಕ್ಷರ ಗಾತ್ರ

ಬೆಂಗಳೂರು:ಮಿದುಳಿನ ಕ್ಯಾನ್ಸರ್‌ಗೆ (ಪೈನಾಲೊಬ್ಲಾಸ್ಟೊಮಾ) ಒಳಗಾಗಿದ್ದ 12 ವರ್ಷದ ಬಾಲಕನಿಗೆ ಪ್ರೋಟಾನ್‌ ಬೀಮ್ ಥೆರಪಿ ಚಿಕಿತ್ಸೆ ನೀಡಿ ಚೆನ್ನೈನ ಅಪೊಲೊ ಪ್ರೋಟಾನ್‌ ಕ್ಯಾನ್ಸರ್‌ ಸೆಂಟರ್‌ನ (ಎಪಿಸಿಸಿ) ವೈದ್ಯರು
ಗುಣಪಡಿಸಿದ್ದಾರೆ.

ಮಿದುಳಿನ ಮಧ್ಯ ಭಾಗದಲ್ಲಿರುವ ಪೀನಲ್ ಗ್ರಂಥಿಯಲ್ಲಿ ಕಾಣಿಸಿಕೊಳ್ಳುವ ಗೆಡ್ಡೆ (ಬ್ರೈನ್‌ ಟ್ರೂಮರ್‌)ಯ ಒಂದು ಪ್ರಕಾರ ಪೈನಾಲೊಬ್ಲಾಸ್ಟೊಮಾ. ಪೀನಲ್ ಗ್ರಂಥಿಯು ಮೆಲಟೋನಿನ್ ಎಂಬ ಹಾರ್ಮೋನ್‌ ಉತ್ಪಾದಿಸುತ್ತದೆ. ಈ ಹಾರ್ಮೋನ್ ಮಾನವ ದೇಹದ ನೈಸರ್ಗಿಕವಾಗಿ ನಿದ್ರೆ ಮತ್ತು ಎಚ್ಚರದ ಅವಸ್ಥೆಯ ಚಕ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

2018 ರಲ್ಲಿ ಬಾಲಕನಿಗೆ ಪೈನಾಲೊಬ್ಲಾಸ್ಟೊಮಾ ಇರುವುದು ದೃಢಪಟ್ಟಿತ್ತು. ಎಂಡೋಸ್ಕೋಪಿಕ್, ಮೂರನೇ ವೆಂಟ್ರಿಕ್ಯುಲೋಸ್ಟೊಮಿ
ಮತ್ತು ಬಯಾಪ್ಸಿ ಪರೀಕ್ಷೆಗಳ ನಂತರ ಐದು ಸುತ್ತುಗಳ ಕಿಮೊಥೆರಪಿ ನೀಡಿ, ಪ್ರೋಟಾನ್‌ ಬೀಮ್ ಥೆರಪಿ ಚಿಕಿತ್ಸೆಗಾಗಿ ಚೆನ್ನೈನ ಎಪಿಎಸಿಸಿಗೆ ಕಳುಹಿಸಲಾಗಿತ್ತು ಎಂದು ಅಪೊಲೊ ಆಸ್ಪತ್ರೆ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಗ್ರೂಪ್‌ ಆಂಕಾಲಜಿ ಮತ್ತು ಇಂಟರ್‌ನ್ಯಾಷನಲ್‌ ಅಧ್ಯಕ್ಷ ದಿನೇಶ್ ಮಾಧವನ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಸ್ಪತ್ರೆಯ ಕ್ಯಾನ್ಸರ್‌ ವಿಭಾಗದ ತಜ್ಞರು ಪ್ರೋಟಾನ್ ಬೀಮ್ ಥೆರಪಿ ಬಳಸಿಕೊಂಡು ಗೆಡ್ಡೆಯ ಗಾತ್ರವನ್ನು ಗಣನೀಯವಾಗಿ ಕಡಿಮೆ ಮಾಡಿದರು ಎಂದರು.

ಹಿರಿಯ ಸಲಹೆಗಾರ ಡಾ.ಶ್ರೀನಿವಾಸ್ ಚಿಲುಕುರಿ, ವಿಶ್ವದಲ್ಲಿ ಪ್ರತಿ ವರ್ಷ 3.30 ಲಕ್ಷ ಮಕ್ಕಳು ಮಿದುಳಿನ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಭಾರತದಲ್ಲಿ 28 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. 24 ಸಾವಿರ ಜನರು ಮೃತ
ರಾಗುತ್ತಿದ್ದಾರೆ. ಎಪಿಸಿಸಿ 300 ಕ್ಕೂ ಹೆಚ್ಚು ಜನರನ್ನು ಗುಣಪಡಿಸಿದೆ. ಅವರಲ್ಲಿ 22 ಮಂದಿ ಬೆಂಗಳೂರಿನವರು ಎಂದರು.

ಪೀನಲ್ ಗ್ರಂಥಿ ಮೆದುಳಿನ ಮಧ್ಯಭಾಗದ ಸ್ಥಳ. ಪ್ರೋಟಾನ್ ಚಿಕಿತ್ಸೆಯು ಕ್ಯಾನ್ಸರ್ ಗೆಡ್ಡೆಯನ್ನು ನಾಶಪಡಿಸಲು ಮತ್ತು ಸುತ್ತಮುತ್ತಲಿನ ಆರೋಗ್ಯಕರ ಅಂಗಾಂಶಗಳಿಗೆ ಹಾನಿಯಾಗದಂತೆ ವಿಕಿರಣವನ್ನು ಹಾಯಿಸಲು ಪ್ರೋಟಾನ್‌ ಥೆರಪಿ ಸಹಾಯ ಮಾಡುತ್ತದೆ. ಅಡ್ಡಪರಿಣಾಮಗಳನ್ನೂ ಕಡಿಮೆ ಮಾಡುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಾಲಕನ ತಂದೆ ಸತೀಶ್‌ ಕುಮಾರ್‌ ವೇಮುಲ, ಎಪಿಸಿಸಿಯಲ್ಲಿ ಚಿಕಿತ್ಸೆ ಪಡೆದ ನವದಿಯಾ ಜೆಮಿನ್‌ ಮನ್ಸುಖ್‌ಭಾಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT