ಭಾನುವಾರ, ಆಗಸ್ಟ್ 25, 2019
28 °C

ಮುಖ್ಯಮಂತ್ರಿ ಮನೆಯ ಮುಂದೆಯೇ ಜನಸ್ಪಂದನೆ

Published:
Updated:
Prajavani

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿಯ ಮನೆಗೆ ಬಂದ ಅಂಗವಿಕಲರ ಕುಟುಂಬವೊಂದಕ್ಕೆ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸಲು ಸೂಚಿಸಿದರು.

ನಾಗೇಶ್ ಎಂಬುವವರು ಕುಟುಂಬದ ಸದಸ್ಯರ ಜೊತೆ ಬಂದಿದ್ದರು. ಮನೆಯಲ್ಲಿ ಇಬ್ಬರು ಅಂಗವಿಕಲರಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

‘ನನಗೊಂದು ಕೆಲಸ ಕೊಟ್ಟರೆ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ. ನಮ್ಮ ಮನವಿಯನ್ನು ದಯವಿಟ್ಟು ಸಕಾರಾತ್ಮಕವಾಗಿ ಪರಿಗಣಿಸಿ’ ಎಂದು ನಾಗೇಶ್ ಕೋರಿದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಯಡಿಯೂರಪ್ಪ , ನಾಗೇಶ್ ಗುತ್ತಿಗೆ ಆಧಾರದ ಮೇಲೆ ವಿಧಾನಸೌಧದಲ್ಲಿ ಕೆಲಸ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

Post Comments (+)